ಈ ಕ್ರಾಂತಿ ಸದ್ಯದಲ್ಲೇ ಸಾಧ್ಯವಾಗಬಹುದಾದ ದಿಕ್ಕಿನಲ್ಲಿ ಮೊದಲ ಹೆಜ್ಜೆಯನ್ನಿವತ್ತು ನಮ್ಮ ದೇಶ ಇಟ್ಟಿದೆ.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಇವತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇಡೀ ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ತನ್ನ ವರದಿ ಸಲ್ಲಿಸಿದೆ.
ಒಟ್ಟಿಗೇ ನಡೆಯಲಿವೆ ಲೋಕಸಭೆ-ವಿಧಾನಸಭೆ ಚುನಾವಣೆಗಳು. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಒಂದೇ ಸಮಯದಲ್ಲಿ ನಡೆಸುವುದು. ಸರ್ಕಾರ ಉರುಳಿದರೆ ಶಾಸನಸಭೆಯ ಬಾಕಿ ಅವಧಿಗಷ್ಟೇ ಮತ್ತೆ ಚುನಾವಣೆ ನಡೆಯಲಿದೆ. ಒಂದು ವೇಳೆ ಯಾವುದಾದರೂ ಸರ್ಕಾರ ಅವಿಶ್ವಾಸದಿಂದ ಅವಧಿ ಮಧ್ಯದಲ್ಲೇ ಉರುಳಿದರೆ ಅಥವಾ ಯಾವುದಾದರೂ ಶಾಸನ ಸಭೆ ಅತಂತ್ರಗೊಂಡು ಮರು ಚುನಾವಣೆ ಅಗತ್ಯವಾದರೆ, ಅಲ್ಲಿ ಆ ಶಾಸನಸಭೆಯ ಇನ್ನುಳಿದ ಅವಧಿಗಷ್ಟೇ ಚುನಾವಣೆ ನಡೆಸುವುದು. ಅಂದರೆ, ಅತಸ್ಮಾತ್ ಯಾವುದೋ ರಾಜ್ಯದ ಸರಿಕಾರ ಒಂದುವರೆ ವರ್ಷದಲ್ಲೇ ಉರುಳಿದರೆ, ಮತ್ತೆ ಚುನಾವಣೆ ನಡೆಯುವುದು ಇನ್ನುಳಿದ ಮೂರೂವರೆ ವರ್ಷಕ್ಕಷ್ಟೇ; ಆಮೇಲೆ ಮತ್ತೆ ಏಕಕಾಲದ ಚುನಾವಣೆಯಲ್ಲಿ ಆ ರಾಜ್ಯವನ್ನೂ ಸೇರಿಸಿಕೊಳ್ಳುವುದು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಲೋಕಸಭೆ ಚುನಾವಣೆ ಮುಗಿದ ನೂರು ದಿನಗಳೊಳಗೆ ಮುಗಿಸುವುದು. ಇದು ಸಾಧ್ಯವಾದರೆ ಸರ್ಕಾರಿ ಬೊಕ್ಕಸಕ್ಕೆ ಅಧಿಕೃತವಾಗಿ ಆಗುವ ಉಳಿತಾಯ ಸುಮಾರು ಐದೂವರೆ ಸಾವಿರ ಕೋಟಿ! ಅನಧಿಕೃತವಾಗಿ ಪಕ್ಷಗಳಿಂದ-ಅಭ್ಯರ್ಥಿಗಳಿಂದ ಹರಿಯುವ ಹಣ ಇನ್ನೆಷ್ಟೊ!