ಮುಜಾಫರ್‌ಪುರ: ಮದುವೆಯ ಚಿತ್ರೀಕರಣಕ್ಕೆ ಬಂದಿದ್ದ ವಿಡಿಯೋ ಗ್ರಾಫರ್ ವರನ ಅಪ್ರಾಪ್ತ ವಯಸ್ಸಿನ ಸಹೋದರಿಯೊಂದಿಗೆ ಓಡಿ ಹೋಗಿರುವ ಘಟನೆ ಬಿಹಾರದ ಮುಜಾಫರ್ ಪುರದಲ್ಲಿ ನಡೆದಿದೆ.
ಅಹಿಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಂದವಾರ ಘಾಟ್ ದಾಮೋದರಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆ ಮುಗಿಯುತ್ತಿದ್ದಂತೆ ಬಾಲಕಿ ಕಾಣದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೋಗ್ರಾಫರ್ ಕೂಡ ನಾಪತ್ತೆಯಾಗಿದ್ದಾನೆ. ಹೀಗಾಗಿ ಪೊಲೀಸರು ಹೆಚ್ಚಿನ ಚಿಕಿತ್ಸೆ ನಡೆಸಿದಾಗ ಪರಾರಿಯಾಗಿರುವುದು ತಿಳಿದುಬಂದಿದೆ.
ಮದುವೆಯ ವಿಡಿಯೋ ಚಿತ್ರೀಕರಣಕ್ಕೆ ವರನ ಸೋದರ ಮಾವ ತನ್ನ ಗ್ರಾಮದಿಂದ ಛಾಯಾಗ್ರಾಹಕನನ್ನು ಕರೆತಂದಿದ್ದಾನೆ. ಎಲ್ಲರೂ ಮದುವೆ ಗದ್ದಲದಲ್ಲಿದ್ದಾಗ ಫೋಟೋಗ್ರಾಫರ್, ವರನ ತಂಗಿಯ ಜೊತೆ ಮಾತಾಡಿದ್ದಾನೆ. ಮದುವೆ ಕಾರ್ಯಕ್ರಮ ಮುಗಿಯುವಷ್ಟರಲ್ಲಿಯೇ ಓಡಿ ಹೋಗಿದ್ದಾನೆ.
ಬಾಲಕಿಯ ಕುಟುಂಬಸ್ಥರು ಅಹಿಯಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.