ಚಂಡೀಗಢ: ಹರಿಯಾಣದ ಬಿಜೆಪಿ ಮುಖ್ಯಸ್ಥ ನಯಾಬ್ ಸಿಂಗ ಸೈನಿ ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕುರುಕ್ಷೇತ್ರದ ಸಂಸದ ಸೈನಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹರಿಯಾಣ ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ನೇಮಕಗೊಂಡಿದ್ದರು. 2019 ರಿಂದ ರಾಜ್ಯವನ್ನು ಆಳಿದ ಆಡಳಿತಾರೂಢ ಭಾರತೀಯ ಜನತಾ ಪಕ್ಷ-ಜನನಾಯಕ್ ಜನತಾ ಪಕ್ಷ (ಬಿಜೆಪಿ-ಜೆಜೆಪಿ) ಮೈತ್ರಿಯ ಬಿರುಕುಗಳ ಮಧ್ಯೆ ಮನೋಹರ್ ಲಾಲ್ ಖಟ್ಟರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಸೈನಿ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು.
ಭಯ ಪಕ್ಷಗಳ ನಡುವಿನ ಬಾಂಧವ್ಯ ಹದಗೆಟ್ಟಿತ್ತು. ಖಟ್ಟರ್ ಸಂಪುಟದಲ್ಲಿ ಸಿಎಂ ಸೇರಿದಂತೆ 14 ಮಂದಿ ಸಚಿವರಿದ್ದು, ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ನೇತೃತ್ವದ ಜೆಜೆಪಿಯ ಮೂವರು ಸದಸ್ಯರು ರಾಜೀನಾಮೆ ನೀಡಿದ್ದರು.
90 ಸದಸ್ಯರಲ್ಲಿ ಬಿಜೆಪಿ 41 ಶಾಸಕರನ್ನು ಹಾಗೂ ಜೆಜೆಪಿ 10 ಸದಸ್ಯರನ್ನು ಹೊಂದಿದೆ. ಪ್ರತಿಪಕ್ಷ ಕಾಂಗ್ರೆಸ್ 30 ಶಾಸಕರನ್ನು ಹೊಂದಿದೆ ಮತ್ತು ಇಂಡಿಯನ್ ನ್ಯಾಷನಲ್ ಲೋಕ ದಳ ಮತ್ತು ಹರಿಯಾಣ ಲೋಕಿತ್ ಪಕ್ಷ ತಲಾ ಒಂದು ಸ್ಥಾನ ಹೊಂದಿದೆ.