ಮುಂಬೈ: 71ನೇ ಮಿಸ್ ವರ್ಲ್ಡ್ ಫೈನಲ್ಸ್ ಸಂದರ್ಭದಲ್ಲಿ ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ ಪ್ರತಿಷ್ಠಿತ ‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್ ಪಡೆದರು.
ಅಂತಾರಾಷ್ಟ್ರೀಯ ಸ್ಪರ್ಧೆಯ ವೇಳೆ ನೀಡಿದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ಅವರು, ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹಿಳೆಯರ ಸಬಲೀಕರಣ ಎಷ್ಟು ಮುಖ್ಯ? ಎಂಬುವುದರ ಕುರಿತು ಮಾತನಾಡಿದರು. ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ದಿ. ನೆಲ್ಸನ್ ಮಂಡೇಲಾ, ಆಪರೇಷನ್ ಹಂಗರ್ ಇನಾ ಪರ್ಲ್ ಮನ್ ಗೆ ಪ್ರಶಸ್ತಿ ನೀಡಲಾಯಿತು.
ತಾ ಅಂಬಾನಿ ಅವರು ಪ್ರಶಸ್ತಿ ಸ್ವೀಕರಿಸಿರುವುದು ಭಾರತೀಯ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಶಿಕ್ಷಣ, ಹೆಲ್ತ್ ಕೇರ್, ಕಲೆ ಮತ್ತು ಸಂಸ್ಕೃತಿ, ಕ್ರೀಡೆ, ದಾನ-ದತ್ತಿ ಕ್ಷೇತ್ರಗಳ ಆಚೆಗೆ ಮಾಡಿರುವಂತಹ ಸೇವೆಗೆ ಒಂದು ನಿದರ್ಶನವಾಗಿದೆ.