ಭಾರತ ತಂಡದ ವಿರುದ್ಧ 5 ಟೆಸ್ಟ್ ಸರಣಿಗೆ ಆಗಮಿಸಿದ್ದ ಇಂಗ್ಲೆಂಡ್ ತಂಡು ಸೋತು ಸುಣ್ಣವಾಗಿದೆ. ಯಶಸ್ವಿ ಜೈಸ್ವಾಲ್ ಸಾಧನೆಯ ಮುಂದೆ ಇಂಗ್ಲೆಂಡ್ ಮಂಕಾಗಿದೆ.
ಸರಣಿಯ ಮೊದಲ ಪಂದ್ಯದಲ್ಲಿ ಆಂಗ್ಲರು ಗೆಲುವು ಸಾಧಿಸಿದ್ದರು. ಆನಂತರ ಭಾರತದ್ದೇ ಪಾರುಪತ್ಯ. ಇಂಗ್ಲೆಂಡ್ ತಂಡದ ಬಾಝ್ಬಾಲ್ಗೆ ಕೌಂಟರ್ ಅಟ್ಯಾಕ್ ನೀಡಿದ್ದು ಯಶಸ್ವಿ ಜೈಸ್ವಾಲ್. ಈ ಟೂರ್ನಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ್ದೇ ಇದಕ್ಕೆ ಸಾಕ್ಷಿ.
ಯಶಸ್ವಿ ಜೈಸ್ವಾಲ್ 5 ಪಂದ್ಯಗಳಿಂದ ಬರೋಬ್ಬರಿ 712 ರನ್ ಗಳಿಸಿ ದಾಖಲೆ ಬರೆದಿದ್ದಾರೆ. ಜೈಸ್ವಾಲ್ ಹೊರತುಪಡಿಸಿದರೆ ಯಾವುದೇ ಬ್ಯಾಟರ್ 500 ರನ್ ಗಳಿಸಿಲ್ಲ.
ಸಹಜವಾಗಿ ಯಶಸ್ವಿ ಗರಿಷ್ಠ ವೈಯುಕ್ತಿಕ ಸ್ಕೋರ್ ಗಳಿಸಿದ್ದಾರೆ. ಮೂರನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ ಅಜೇಯ 214 ರನ್ ಬಾರಿಸಿ ಮಿಂಚಿದ್ದರು. ಅಲ್ಲದೇ, ಅತೀ ಹೆಚ್ಚು ಬೌಂಡರಿ ಗಳಿಸಿದ್ದು ಜೈಸ್ವಾಲ್. 5 ಪಂದ್ಯಗಳಲ್ಲಿ 26 ಸಿಕ್ಸ್ ಹಾಗೂ 68 ಬೌಂಡರಿ ಸಿಡಿಸಿದ್ದಾರೆ.
89 ಸರಾಸರಿಯಲ್ಲಿ ರನ್ ಗಳಿಸಿರುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ 700+ ರನ್ ಕಲೆಹಾಕಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆ ಬರೆದರು. ತಂಡವೊಂದರ ವಿರುದ್ಧ ಟೆಸ್ಟ್ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡರು.ಸಹಜವಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.