ಬೆಂಗಳೂರು : ರಾಮೇಶ್ವರ ಕೆಫೆ 2021ರಲ್ಲಿ ಸ್ಥಾಪನೆಯಾಗಿದ್ದರೂ ಕಡಿಮೆ ಅವಧಿಯಲ್ಲಿ ಜನಪ್ರಿಯ ಗಳಿಸಿತ್ತು. ಇಲ್ಲಿ ಎಲ್ಲ ಆಹಾರ ಪದಾರ್ಥಕ್ಕೂ ತುಪ್ಪದ ವಾಸನೆ ಇರಲೇಬೇಕು.
ಹೀಗಾಗಿ ಆರಂಭವಾದ ಕೆಲವೇ ತಿಂಗಳಲ್ಲಿ ರಾಮೇಶ್ವರಂ ಕೆಫೆ ಆಹಾರ ಪ್ರಿಯರ ಮನಸ್ಸು ಗೆದ್ದಿತ್ತು. ಈ ಹಿನ್ನೆಲೆಯಲ್ಲಿ ಇದು ದೇಶಾದ್ಯಂತ ತನ್ನ ಬ್ರ್ಯಾಂಚ್ ಆರಂಭಿಸಿತ್ತು. ಆದರೆ, ಈ ಕೆಫೆಯಲ್ಲಿಯೇ ಬಾಂಬ್ ಬ್ಲಾಸ್ಟ್ ಆಗಿದ್ದು, 9 ಜನ ಗಾಯಗೊಂಡಿದ್ದಾರೆ.
ಬೆಂಗಳೂರಿನಲ್ಲೂ ಹಲವು ಬ್ರಾಂಚ್ಗಳಿದ್ದು, ಜನ ಸಾಮಾನ್ಯರ ಜೊತೆಗೆ ಐಟಿ ಸಿಬ್ಬಂದಿಯ ಹಾಟ್ ಫೇವರೆಟ್ ಕೂಡ ಆಗಿದೆ. ಈಗ ಗುಜರಾತ್ನ ಜಾಮ್ನಗರದಲ್ಲಿ ಮುಖೇಶ ಅಂಬಾನಿ ಮಗನ, ವೈಭವದ ಮದ್ವೆಗೆ ಸಿದ್ಧತೆ ನಡೆಯುತ್ತಿದ್ದು, ಊಟದ ತಯಾರಿಕೆಗೆ ರಾಮೇಶ್ವರಂ ಕೆಫೆಯೂ ಆಯ್ಕೆಯಾಗಿದೆ. 5 ದಿನದ ಹಿಂದೆಯೇ ರಾಮೇಶ್ವರಂ ಕೆಫೆಯ 50 ಜನರ ತಂಡ, ಜಾಮ್ನಗರಕ್ಕೆ ತೆರಳಿದೆ. ಮುಖೇಶ್ ಅಂಬನಿಯ ಪುತ್ರನ ಮದುವೆಗೆ ದೇಶ- ವಿದೇಶಗಳಿಂದ ಬಾಣಸಿಗರನ್ನ ಕರೆಯಿಸಲಾಗಿದ್ದು, ನಮ್ಮ ರಾಜ್ಯದಿಂದ ರಾಮೇಶ್ವರಂ ಕೆಫೆ ಆಯ್ಕೆಯಾಗಿದೆ. ಆದರೆ, ಈ ಕೆಫೆ ಮೇಲೆ ಯಾರ ದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ. ಬಾಂಬ್ ಬ್ಲಾಸ್ಟ್ ಆಗಿದ್ದು, ಇದು ವೈಯಕ್ತಿಕವೋ? ಅಥವಾ ಬೇರೆ ಕಾರಣ ಇದೆಯೋ? ತಿಳಿಯದಾಗಿದೆ.