ರಾಯಚೂರು : ಸಿಂಧನೂರು ಪಟ್ಟಣದ ಹೋಲಿ ಫ್ಯಾಮಿಲಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದ ಮಹ್ಮದ್ ತಾಹೀರ್ ವಿದ್ಯಾರ್ಥಿ ಕೂದಲು ಜಾಸ್ತಿ ಬಿಟ್ಟಿದ್ದಾನೆ ಎಂದು ಶಿಕ್ಷಕರು ಎರ್ರಾಬಿರ್ರಿಯಾಗಿ ಕತ್ತರಿಸಿದ್ದು, ವಿದ್ಯಾರ್ಥಿಯ ಪೋಷಕರು ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಪೋಷಕರು ಹೋಲಿ ಫ್ಯಾಮಿಲಿ ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಘಟನೆಯಾಗುವ ವೇಳೆ ಫಾದರ್ ಜ್ಞಾನಪ್ರಕಾಶ್ ಅವರಿಂದ ಹಾಗೂ ಶಿಕ್ಷಕರಿಂದ ಅಮಾನವೀಯ ವರ್ತನೆ ನಡೆದಿದ್ದು, ಪೋಷಕರ ಭೇಟಿ ವೇಳೆಯೂ ಅನುಚಿತ ವರ್ತನೆ ನಡೆದಿದೆ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ, ದೈಹಿಕ ಶಿಕ್ಷಕಿ ಮತ್ತು ಫಾದರ್ ಜ್ಞಾನಪ್ರಕಾಶ್ ವಿರುದ್ಧ ಕ್ರಮ ಕೈಗೊಳ್ಳಲು ಪೋಷಕರು ಬಲವಾಗಿ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ : ಸಾಲ ಬಾಧೆಯಿಂದ ಹೈಟೆನ್ಶನ್ ವಿದ್ಯುತ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಭೂಪ!



















