ದಾವಣಗೆರೆ : ಹಿರಿಯರಾದ ಡಾ. ಎಚ್.ಸಿ ಮಹಾದೇವಪ್ಪ ಬೀದಿನಾಯಿ ಪದ ಬಳಕೆ ಸರಿಯಲ್ಲ. ಅದು ಡಿಕೆ ಬಣ ಇರಬಹುದು ಅಥವಾ ಸಿದ್ದರಾಮಯ್ಯ ಬಣ ಇರಬಹುದು ಅವರು ಹಾಗೇ ಹೇಳಬಾರದಿತ್ತು ಎಂದು ಡಿಕೆ ಆಪ್ತ ಶಾಸಕ ಬಸವರಾಜ್ ಶಿವಗಂಗಾ ಕಿಡಿಕಾರಿದ್ದಾರೆ.
ಸುದ್ದಿಗಾರರೊದಿಗೆ ದಾವಣಗೆರೆಯಲ್ಲಿ ಮಾತನಾಡಿದ ಶಾಸಕ ಬಸವರಾಜ್ ಶಿವಗಂಗಾ, ಅಧಿಕಾರ ಹಂಚಿಕೆ ಬಗ್ಗೆ ಈಗಾಗಲೇ ನಾನು ಹೇಳಿದ್ದೇನೆ. ಡಿಸೆಂಬರ್‌ನಲ್ಲಿ ಡಿಕೆಶಿ ಆಗುತ್ತಾರೆ ಎಂದು ರಕ್ತದಲ್ಲಿ ಬರೆದು ಕೊಡುವೆ ಎಂದಿದ್ದೆ, ಅದಾದ ಬಳಿಕ ನಾನು ಏನನ್ನು ಹೇಳಿಲ್ಲ ಎಂದಿದ್ದಾರೆ.
ಶಾಸಕರು ಈ ಸಂದರ್ಭದಲ್ಲಿ ವಿದೇಶಿ ಪ್ರವಾಸ ಅಗತ್ಯ ಇರಲಿಲ್ಲ. ಬಜೆಟ್ ಫೂರ್ವಭಾವಿ ಸಭೆ ನಡೆಯುತ್ತಿದೆ ಹಾಗಾಗಿ ಈ ಸಂದರ್ಭದಲ್ಲಿ ಹೋಗುವುದು ಬೇಡ ಅನ್ನಿಸುತ್ತೆ. ಆದರೆ ಹೋಗಿದ್ದಾರೆ. ಹ್ಯಾಪಿ ಜರ್ನಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನೇಮೋತ್ಸವದ ವೇಳೆ ತನ್ನಿಂದ ತಾನೇ ತೂಗಿದ ಉಯ್ಯಾಲೆ | ದೈವದ ಕಾರ್ಣಿಕ ಕಂಡು ಭಕ್ತರು ಅಚ್ಚರಿ!



















