ವಿಜಯಪುರ : ಇದು ಡಿ.ಕೆ ಶಿವಕುಮಾರ್‌ಗೆ ಕೊನೆಯ ಅವಕಾಶ.ಇನ್ನೂ ಮುಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುವದೇ ಇಲ್ಲ.ಹಾಗೆಂದ ಮಾತ್ರಕ್ಕೆ ಸಿದ್ದರಾಮಯ್ಯ ಏನು ಸ್ಥಾನ ಬಿಟ್ಟು ಕೊಡಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಯತ್ನಾಳ, ಆದಷ್ಟು ಬೇಗಾ ವಿಧಾನ ಸಭೆ ವಿಸರ್ಜನೆ ಆದರೂ ಅಚ್ಚರಿ ಇಲ್ಲ. ಡಿ ಕೆ ಶಿವಕುಮಾರ್ ಅವರಿಗೆ ಇದು ಡೂ ಆರ್ ಡೈ, ಇನ್ನೂ ಸಿದ್ದರಾಮಯ್ಯ ಇನ್ನು ಮುಂದೆ ಮುಖ್ಯಮಂತ್ರಿ ಆಗಲ್ಲ ಎಂದಿದ್ದಾರೆ.
ಇನ್ನೂ ಯತೀಂದ್ರ ವಿರುದ್ಧ ಕಿಡಿಕಾರಿದ ಯತ್ನಳ್ ಸಿದ್ದರಾಮಯ್ಯ ನವರ ಮಗ ಅಷ್ಟು ಯೋಗ್ಯ ಇಲ್ಲ, ಆತನ ಕೂಡಾ ವಸೂಲಿ ಕಂಪನಿ. ಯಡಿಯೂರಪ್ಪನ ಮಗನ ಹಾಗೆ ಈತನೂ ವಸೂಲಿ ಕಂಪನಿ.ಈತ ವಿಜಯೇಂದ್ರನ ಕಡೆಗೆ ರಾತ್ರಿ ಟ್ರೇನಿಂಗ್ ತಗೋತಾನೆ ಹೇಗೆ ಡುಪ್ಲಿಕೇಟ್ ಸಹಿ ಮಾಡುವುದು ಎಂದು ವ್ಯಂಗ್ಯ ಮಾಡಿದ್ದಾರೆ.
2028 ಕ್ಕೆ ಯಾವ ಸರ್ಕಾರ ಬರತ್ತೆ ನೋಡೋಣ.ಬಿಜೆಪಿ ಸರ್ಕಾರ ಬರತ್ತೊ, ಯತ್ನಾಳ ಗೌಡನ ಸರ್ಕಾರ ಬರತ್ತೋ, ಜೆಸಿಬಿ ಸರ್ಕಾರ ನೊಡೋಣ.2028 ಕ್ಕೆ ಕರ್ನಾಟಕ ದ ಮುಖ್ಯಮಂತ್ರಿ ಆಗುವದು ಗಟ್ಟಿ ಇದೆ ಎಂದಿದ್ದಾರೆ.
ನವೆಂಬರ್‌ಗೆ ವಿಜಯೇಂದ್ರ ಬದಲಾವಣೆ ಆಗುತ್ತಾರೆ
ಆ ಪಾರ್ಟಿ ಆಂತರಿಕ ವಿಚಾರ ಗೊತ್ತಿಲ್ಲ. ನವೆಂಬರ್‌ನಲ್ಲಿ ಬದಲಾಗುತ್ತಾರೋ ಸೂರ್ಯ, ಚಂದ್ರ ಇರುವವರೆಗೆ ಇವರೇ ಇರುತ್ತಾರೋ ಗೊತ್ತಿಲ್ಲ. ವಿಧಾನ ಸಭೆಯಲ್ಲಿಯೇ ವಿಜಯೇಂದ್ರ ಮಾತನಾಡಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಜಿ ರಾಮ್ ಜಿ ಬಗ್ಗೆ ಸಮರ್ಥನೆ ಮಾಡಿಕೊಳ್ಳಬೇಕು. ನನಗೆ ಬಿಜೆಪಿಯಿಂದ ಹೊರಗೆ ಹಾಕಿದರೂ ನಾನು ಜಿ ರಾಮ್ ಜಿ ಬಗ್ಗೆ ಮಾತನಾಡಿದೆ. ವಿಜಯೇಂದ್ರಗೆ ಒಂದೇ ಪರಿಹಾರ ಸ್ವಂತ ಮನಸ್ಸಿಂದ ರಾಜೀನಾಮೆ ಕೊಡಬೇಕು ಎಂದು ಹೇಳಿದ್ದಾರೆ.
ಬೇರೆ ವಿಧಾನ ಸಭಾ ಮತಕ್ಷೇತ್ರದ ಬಗ್ಗೆ ಬೇರೆಯವರು ತಲೆ ಕೆಡಿಸಿಕೊಳ್ಳಬೇಡಿ ಎಂದು ಕಾರ್ಯಕರ್ತರಿಗೆ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡುತ್ತಾ, ವಿಜಯೇಂದ್ರ ತಾನು ಎಲ್ಲಿ ಚುನಾವಣೆ ನಿಲ್ಲಬೇಕು ಎಂಬುದು ಡಿಸೈಡ್ ಮಾಡಲಿ. ವಿಜಯೇಂದ್ರ ಶಿಕಾರಿಪುರದ ಬಗ್ಗೆ ತಲೆ ಕೆಡಿಸಿಕೊಳ್ಳಲಿ, ಶಿಕಾರಿಪುರವೇ ಅಳಗಾಡುತ್ತಿದೆ. ಎಲ್ಲಿ ಮೈಸೂರು ನಿಲ್ಲುವುದು, ವರಣಾ ನಿಲ್ಲುವುದು, ತುಮಕೂರು ನಗರ ನಿಲ್ಲುವುದೋ, ರಾಜಾಜಿನಗರ ನಿಲ್ಲುವುದೋ ಎಂದು ಅಡ್ಡಾಡುತ್ತಿದ್ದಾರೆ ಎಂದಿದ್ದಾರೆ.
ವಿಜಯಪುರದವರು ಬಾಗಲಕೋಟೆ ವಿಚಾರವಾಗಿ ತಲೆ ಕೆಡಿಸಿಕೊಳ್ಳಬೇಡಿ, ಬೀಳಗಿ ಅವರು ತಲೆ ಕಡೆಸಿಕೊಳ್ಳಬೇಡಿ ಎಂದರೆ ಹೇಗೆ. ಮೊದಲು ಶಿಕಾರಿಪುರ ಗಟ್ಟಿ ಇದೆ ಇಲ್ಲವೋ ನೊಡಿಕೊಳ್ಳಲಿ, ಅವರ ಹತಾಶಯರಾಗಿದ್ದಾರೆ. ವಿಧಾನ ಸಭೆಯಲ್ಲಿ ಸಹಿತ ವಿಜಯೇಂದ್ರ ಏನು ಮಾತನಾಡಲಿಲ್ಲ. ಭ್ರಷ್ಟಾಚಾರದ ವಿಷಯದಲ್ಲಿ ಆರ್ ಅಶೋಕ, ಸುನೀಲ್ ಕುಮಾರ ವಿಧಾನ ಸಭೆಯಲ್ಲಿ ಮಾತನಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ಈ ವಿಚಾರವಾಗಿ ಮಾತನಾಡಲೇ ಇಲ್ಲ. ನಾವು ಹೇಗೆ ಸಿದ್ದರಾಮಯ್ಯ ನವರಿಗೆ ಡಿ ಕೆ ಶಿವಕುಮಾರ್ ಅವರಿಗೆ ಅಟ್ಯಾಕ್ ಮಾಡುತ್ತೇವೆ. ಇವರು ಮಾಡಲೇ ಇಲ್ಲ, ಇವರು ಜವಾಬ್ದಾರಿಯಿಂದ ವಿಫಲರಾಗಿದ್ದಾರೆ. ಸುಮ್ಮನೆ ಬಿಟ್ಟು ವಿಜಯೇಂದ್ರ ಮನೆಯಲ್ಲಿ ಕೂಡುವುದು ಒಳ್ಳೆಯದು ಎಂದಿದ್ದಾರೆ.
ಇದನ್ನೂ ಓದಿ : ಬಾಗೇಪಲ್ಲಿ ‘ಕೈ’ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು | ಹೈಕೋರ್ಟ್‌ನಿಂದ ಮಹತ್ವದ ಆದೇಶ



















