ಮೈಸೂರು : ಮಾರಮ್ಮನ ಹಬ್ಬದಲ್ಲಿ ಭಕ್ತಿಯ ಪರಮಾವಧಿ ಎಂಬಂತೆ ಬಾಯಿಗೆ ಬೀಗ ಹಾಕಿ ಭಕ್ತರು ಹರಕೆ ಸಲ್ಲಿಸಿರುವ ಘಟನೆ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿಯಲ್ಲಿ ಗ್ರಾಮದ ದೇವತೆಯ ಜಾತ್ರಾ ಮಹೋತ್ಸವದಲ್ಲಿ ನಡೆದಿದೆ.
ಚುಂಚನಹಳ್ಳಿ ನಿವಾಸಿ ಮುದ್ದುಮಾದಯ್ಯ ಎಂಬ ಭಕ್ತನೊಬ್ಬ ಬಾಯಿಗೆ 12 ಸರಳುಗಳನ್ನ ಚುಚ್ಚಿಕೊಂಡು ಹರಕೆ ತೀರಿಸಿದ್ದಾನೆ. ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಮೊದಲಿಗೆ ಮಡ ಸೇವೆ ಸಲ್ಲಿಕೆ, ನಂತರ ಬೆಳಗಿನ ಜಾವದಲ್ಲಿ ಮಹಿಳೆಯರು, ಬಾಲೆಯರು ಹೆಬ್ಬರಕ್ಕೆ ಅಕ್ಕಿ ಎಣ್ಣೆ ಹಾಕಿ ಪೂಜೆ ಸಲ್ಲಿಸುತ್ತಾರೆ. ನಂತರ ತಂಪು (ತಂಬಿಟ್ಟು) ತಂಪೋತ್ಸವದಲ್ಲಿ ಭಾಗಿಯಾಗುತ್ತಾರೆ. ಬಳಿಕ ಭಕ್ತರು ಬಾಯಿ, ಕಿವಿ, ಕತ್ತಿಗೆ ಸರಳು ಚುಚ್ಚಿಕೊಂಡು ಮಾರಮ್ಮನಿಗೆ ಹರಕೆ ಸಲ್ಲಿಸಿಸುತ್ತಾರ.
ಈ ಸಾಂಪ್ರದಾಯಿಕವಾಗಿ ಮಾರಿಹಬ್ಬವನ್ನು ಗ್ರಾಮಸ್ಥರು ಹಲವು ಕಟ್ಟುಪಾಡುಗಳೊಂದಿಗೆ ವಿಜೃಂಭಣೆಯಿಂದ ಆಚರಿಸಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಗ್ರಾಮದ ದೇವತೆಯ ಹಬ್ಬದಲ್ಲಿ ಗ್ರಾಮಸ್ಥರು ಬಟ್ಟೆ ಒಗೆಯುವಂತಿಲ್ಲ, ಬೇರೆ ಗ್ರಾಮಗಳಿಗೆ ತೆರಳುವಂತಿಲ್ಲ, ಪೊರಕೆಯಲ್ಲಿ ಕಸ ಗುಡಿಸುವಂತಿಲ್ಲ, ಒಗ್ಗರಣೆ ಹಾಕುವಂತಿಲ್ಲ ಹೀಗೆ ಹಲವು ಕಟ್ಟುಪಾಡುಗಳನ್ನು ಪಾಲಿಸುತ್ತಾರೆ. ಈ ಅದ್ಧೂರಿ ಜಾತ್ರೆಯಲ್ಲಿ ಸಹಸ್ರಾರು ಮಂದಿ ಭಕ್ತರು ಭಾಗಿಯಾಗಿದ್ದರು.
ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಭಾರೀ ಅವ್ಯವಸ್ಥೆ | ಸಾರ್ವಜನಿಕರಿಂದ ಆಕ್ರೋಶ!



















