ನೆಲಮಂಗಲ : ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನೆಲಮಂಗಲ ಬಳಿಯ ಡಾಬಾದಲ್ಲಿ ನಡೆದಿದೆ. ಬೆಂಗಳೂರಿನ ಆಟೋ ನಾಗ (32) ಕೊಲೆಯಾದ ರೌಡಿಶೀಟರ್.
ಲಗ್ಗೆರೆ ಹಾಗೂ ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ಆಟೋ ನಾಗನ ಮೇಲೆ ರೌಡಿಶೀಟ್ ಓಪನ್ ಆಗಿತ್ತು. ಇದೀಗ ನೆಲಮಂಗಲ ಬಳಿಯ ಡಾಬಾದಲ್ಲಿ ಆಟೋ ನಾಗನನ್ನು ಕೊಲೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಜೊತೆಲಿದ್ದವರಿಂದಲೇ ಆಟೋ ನಾಗ ಕೊಲೆಯಾದ ಶಂಕೆ ವ್ಯಕ್ತವಾಗಿದೆ.
ಮಾಹಿತಿಗಳ ಪ್ರಕಾರ, ರೌಡಿಶೀಟರ್ ಆಟೋ ನಾಗ ಗ್ಯಾಂಬ್ಲಿಂಗ್ ಆಡಲು ಅಭಿ ಎಂಬಾತನ ಜೊತೆ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ಸೆಟ್ಲ್ ಮಾಡಿಕೊಳ್ಳೊಣ ಎಂದು ಡಾಬಾಗೆ ಕರೆಸಿದ್ದ ಅಭಿ ಹಾಗೂ ತಂಡ, ಮಚ್ಚು-ಲಾಂಗ್‌ಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಬಹಿಷ್ಕಾರದ ಹೈಡ್ರಾಮಾ ಅಂತ್ಯ | ವಿಶ್ವಕಪ್‌ಗೆ ತಂಡ ಪ್ರಕಟಿಸಿದ ಪಾಕಿಸ್ತಾನ.. ಪ್ರಮುಖ ಆಟಗಾರರಿಗೆ ಕೊಕ್!



















