ಬೆಂಗಳೂರು : ನಟ ಡಾಲಿ ಧನಂಜಯ್ ಅವರು ಬಿರಿಯಾನಿ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಲಿಂಗಾಯತರಾಗಿ ಅವರು ಮಾಂಸಾಹಾರ ಸೇವಿಸಬಹುದೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಬಿರಿಯಾನಿ ಹೋಟೆಲ್‌ವೊಂದರ ಉದ್ಘಾಟನೆಗೆ ಹೋಗಿದ್ದ ನಟ ಡಾಲಿ ಧನಂಜಯ ಕಾರ್ಯಕ್ರಮ ಮುಗಿದ ಬಳಿಕ ಹೋಟೆಲ್‌ನಲ್ಲಿಯೇ ಬಾಳೆಎಲೆಯಲ್ಲಿ ಭರ್ಜರಿ ಬಿರಿಯಾನಿ ಊಟ ಮಾಡಿದ್ದಾರೆ.
ಈ ಕುರಿತ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಅಂತೆಯೇ ಲಿಂಗಾಯತರಾಗಿರುವ ಡಾಲಿ ಧನಂಜಯ್ ಮಾಂಸಾಹಾರ ಸೇವನೆ ಮಾಡಬಹುದಾ..? ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಎಕ್ಸ್‌ನಲ್ಲಿ @sanatan_kannada ಪೋಸ್ಟ್ ಮಾಡಿರುವ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ‘ಲಿಂಗಾಯತರ ಮಾಂಸಾಹಾರ ಸೇವನೆ ಮಾಡೋದಿಲ್ಲ ಅಂತಾ ಹೇಳಿದವರು ಯಾರು? ಲಿಂಗಾಯುತ ಧರ್ಮದ ಆರಂಭದಲ್ಲೇ ವೇದಗಳನ್ನು ವಿರೋಧಿಸಿದ್ದವು. ಅವರು ಆಗಲೇ ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಲಿಂಗಾಯತ ಧರ್ಮ ಯಾರಿಗೂ ಯಾವುದನ್ನೂ ಹೇರೋದಿಲ್ಲ’ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಹಲವರು ನಟನ ವಿರುದ್ದವಾಗಿ ಕಾಮೆಂಟ್ ಹಾಕಿದ್ದಾರೆ.
ಡಾಲಿ ಪರ ನಿಂತ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್
ಈ ವಿಚಾರವಾಗಿ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಡಾಲಿ ಪರ ಬ್ಯಾಟ್ ಬೀಸಿದ್ದಾರೆ. ಲಿಂಗಾಯಿತರು ಮಾಂಸಹಾರ ಸೇವಿಸ್ತಾರ ಎಂಬ ಪ್ರಶ್ನೆಗೆ ಚಕ್ರವರ್ತಿ ಚಂದ್ರಚೂಡ್ ಅವರು ಟಾಂಗ್ ಕೊಟ್ಟಿದ್ದು, ಒಂದು ಜೀವಿಯ ಹಸಿವು, ಮತ್ತೊಂದು ಜೀವಿಯ ಸಾವು, ಹಸಿವು ಎಂಬುದೇ ಒಂದು ಪ್ರಾರ್ಥನೆ, ಅನ್ನ ಮತ್ತು ಹಸಿವಿಗೆ ಜಾತಿಯನ್ನ ಹೊಲೆಯಬೇಡಿ ಎಂಬ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ಯುವಕನ ಹತ್ಯೆ | ಜೀವಂತವಾಗಿ ಸುಟ್ಟು ಹಾಕಿದ ಪಾಪಿಗಳು!



















