ಮಂಡ್ಯ: ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಕಲಹ ಉಂಟಾಗಿ ಗದ್ದೆಯಲ್ಲಿಯೇ ಯುವಕನಿಗೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಮಂಡ್ಯದ ಹೊಸಹಳ್ಳಿ ಸಮೀಪ ನಡೆದಿದೆ.
ಅಂದಾನಿಗೌಡ ತಮ್ಮ ಜಮೀನು ಅಳತೆ ಮಾಡಿಸುತ್ತಿದ್ದ ವೇಳೆ ಚಿಕ್ಕಪ್ಪನ ಮಕ್ಕಳು ಅಳತೆ ಬಳಿಕ ಕಲ್ಲು ನೆಡುವ ವೇಳೆ ಜಗಳ ತೆಗೆದು ಯುವಕನಿಗೆ ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
*ಅಂದಾನಿಗೌಡನ ತಾಯಿ ಹಾಗೂ ಸಹೋದರಿ ಪುತ್ರ ನಿತಿನ್ ಮೇಲೆ ಹಲ್ಲೆ ಮಾಡಲಾಗಿದ್ದು, ಅನುಕುಮಾರ್, ಮನುಕುಮಾರ್ ಹಾಗೂ ಶೀತಲ್ ಗೌಡ ಎಂಬುವವರು ನಿತಿನ್ ಮೇಲೆ ಹಲ್ಲೆಮಾಡಿ, ಅಟ್ಟಾಡಿಸಿ ಹಿಗ್ಗಾಮುಗ್ಗ ಥಳಿಸಿದ್ದಾರೆ ಎನ್ನಲಾಗುತ್ತಿದೆ.
ಯುವಕನ ಮೇಲೆ ಹಲ್ಲೆ ನಡೆಸಿದ ಅನುಕುಮಾರ್, ಮನುಕುಮಾರ್, ಶೀತಲ್ ಗೌಡನ ದರ್ಪ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈ ಘಟನಾ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಸಾಕ್ಷಿಇದ್ದರೂ ಕೂಡ ಪೊಲೀಸರು ಇನ್ನು ಆರೋಪಿಗಳನ್ನ ಬಂಧಿಸಿಲ್ಲಾ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: KMFನಿಂದ ಗ್ರಾಹಕರಿಗೆ ಗುಡ್‌ನ್ಯೂಸ್ | ಇನ್ಮುಂದೆ 10ರೂ.ಗೆ ಸಿಗುತ್ತೆ ನಂದಿನಿ ಹಾಲು, ಮೊಸರು!



















