ಚಾಮರಾಜನಗರ: ಚಾಮರಾಜನಗರದಲ್ಲಿ 50 ಸಾವಿರ ರೂಪಾಯಿಗೆ ತಂದೆ-ತಾಯಿ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಮಸಮುದ್ರ ನಿವಾಸಿಗಳಾದ ಸಿಂಧು ಹಾಗೂ ಮಂಜುನಾಯಕ ದಂಪತಿ ತಮ್ಮ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದರು. ಶಿಶು ಅಭಿವೃದ್ಧಿ ಅಧಿಕಾರಿ ಹೆಣ್ಣುಮಗು ಜನಿಸಿದ್ದು, ತಂದೆ-ತಾಯಿ ವಶದಲ್ಲಿಲ್ಲ ಎಂಬ ಮಾಹಿತಿ ನೀಡಲಾಗಿತ್ತು.
ದೂರಿನ ಮೇಲೆ ಚಾಮರಾಜನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಚೆಲುವಾಂಬ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರಳಾಗಿದ್ದ ಶಾಂತ ಮಧ್ಯವರ್ತಿಗಳ ಮೂಲಕ ಮಗು ಮಾರಾಟವಾಗಿತ್ತು. ಹಾಸನ ಮೂಲದ ಜವರಯ್ಯ ಹಾಗೂ ನೇತ್ರಾ ದಂಪತಿಗೆ 50 ಸಾವಿರಕ್ಕೆ ಮಗು ಮಾರಾಟ ಮಾಡಿದ್ದ ಬೆಳಕಿಗೆ ಬಂದಿದೆ.
ಸದ್ಯ ಮಗುವನ್ನು ಶಿಶು ಅಭಿವೃದ್ಧಿ ಇಲಾಖೆಗೆ ಪೊಲೀಸರು ಒಪ್ಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 6 ತಿಂಗಳಿಂದ ತಲೆಮರೆಸಿಕೊಂಡಿದ್ದ ತಂದೆ ಮಂಜುನಾಯಕ, ತಾಯಿ ಸಿಂಧು, ಮಧ್ಯವರ್ತಿ ಶಾಂತ, ಅಕ್ರಮವಾಗಿ ಮಗುವನ್ನು ಪಡೆದ ಜವರಯ್ಯ, ನೇತ್ರಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾಂತ್ರಿಕ ಹಾಗೂ ವೈಜ್ಞಾನಿಕ ತನಿಖಾ ತಂಡಗಳ ಮೂಲಕ ಬಂಧಿಸಲಾಗಿದೆ. ಎಸ್‌ಪಿ ಮುತ್ತುರಾಜ್ ಪ್ರಕರಣವನ್ನು ಭೇದಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಅಪ್ರಾಪ್ತ ಬಾಲಕಿ ಗ್ಯಾಂಗ್ ರೇಪ್ ಪ್ರಕರಣ | ಇಬ್ಬರಿಗೆ ಜೀವಾವಧಿ, ಇನ್ನಿಬ್ಬರಿಗೆ 20 ವರ್ಷ ಕಠಿಣ ಶಿಕ್ಷೆ ಪ್ರಕಟ!



















