ಉಡುಪಿ : ಉಡುಪಿ ಕರಾವಳಿಯಲ್ಲಿ ಬೋಟ್‌ನಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಮೀನುಗಾರರಿಗೆ ಸ್ಟಿಂಗ್ ರೇ ಮೀನುಗಳು ರಾಶಿ ರಾಶಿಯಾಗಿ ಬಲೆಗೆ ಬಿದ್ದಿವೆ.
ಸ್ಥಳೀಯ ಮೀನುಗಾರರು ತಿಳಿಸಿದಂತೆ, ಆಳಸಮುದ್ರ ಮೀನುಗಾರಿಕೆ ಎಂದರೆ ಕೆಲವೊಮ್ಮೆ ದೊಡ್ಡ ಲಾಟರಿ ಗೆದ್ದಂತೆ, ಕೆಲವೊಮ್ಮೆ ನಿರಾಶೆ ಮಾತ್ರ. ಲಕ್ಷಾಂತರ ರೂ. ಖರ್ಚು ಮಾಡಿ ತುಂಬ ದೂರದ ತನಕ ಮೀನುಗಾರಿಕೆಗೆ ಹೋಗಿ ಕೆಲವೊಮ್ಮೆ ಮೀನು ಸಿಗದೇ ಬರುವ ಘಟನೆಗಳು ಸಾಮಾನ್ಯ. ಆದರೆ ಈ ಬಾರಿ, ಆಕಸ್ಮಿಕವಾಗಿ ಲಕ್ಷಾಂತರ ಮೌಲ್ಯದ ಮೀನುಗಳು ಬಲೆಗೆ ಬಿದ್ದಿರುವುದು ಮೀನುಗಾರರಿಗಾಗಿ ಜಾಕ್ಪಾಟ್ ಆಗಿದೆ.
ಸ್ಟಿಂಗ್ ರೇ ಮೀನು, ಇದರ ಉಣಿಗೆಯನ್ನು ಒಣಗಿಸಿ ಮಾರಾಟ ಮಾಡುವ ಉದ್ಯಮವೂ ಇದೆ. ಈ ಬಂಪರ್ ಬೇಟೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಮೀನುಗಾರರಲ್ಲಿ ಆನಂದತಂದಿದೆ.
ಇದನ್ನೂ ಓದಿ : ಶಿವಮೊಗ್ಗ | ಗಣರಾಜ್ಯೋತ್ಸವದ ನಿಮಿತ್ತ ಇಂದಿನಿಂದ ಮೂರು ದಿನ ಮಲೆನಾಡು ಕರಕುಶಲ ಉತ್ಸವ, ಫಲಪುಷ್ಪ ಪ್ರದರ್ಶನ!



















