ಕೋಲಾರ: ಗ್ರಾಮ ಪಂಚಾಯಿತಿ ಸಿಬ್ಬಂದಿಯಿಂದಲೇ ಮತಾಂತರಕ್ಕೆ ಯತ್ನ ನಡೆದಿದೆ ಎಂಬ ಗಂಭೀರ ಆರೋಪ ಕೋಲಾರ ಜಿಲ್ಲೆಯಲ್ಲಿ ಕೇಳಿಬಂದಿದೆ.
ಬಂಗಾರಪೇಟೆ ತಾಲೂಕಿನ ದಿನ್ನೂರು ಗ್ರಾಮದಲ್ಲಿ ಕರಪತ್ರಗಳನ್ನು ಹಂಚುತ್ತಿದ್ದ ಮೂವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಕರಪತ್ರಗಳನ್ನು ಕಸಿದುಕೊಂಡು ಹರಿದು ಬಿಸಾಡಿದ ಘಟನೆ ನಡೆದಿದೆ.
ಗೊಲ್ಲಹಳ್ಳಿ ಗ್ರಾಮದ ಚರ್ಚ್‌ಗೆ ನಾಳೆ ಪ್ರಾರ್ಥನೆಗೆ ಬರುವಂತೆ ಆಹ್ವಾನಿಸುವ ಕರಪತ್ರಗಳನ್ನು, ಗ್ರಾಮ ಪಂಚಾಯ್ತಿಯ ಸ್ವಚ್ಚವಾಹಿನಿ ವಾಹನದ ಸಿಬ್ಬಂದಿಯಾದ ಶಶಿಕಲಾ, ನಾಗವೇಣಿ ಹಾಗೂ ವೆಂಕಟರತ್ನ ಎಂಬವರು ಹಂಚಿಕೆ ಮಾಡುತ್ತಿದ್ದರು ಎನ್ನಲಾಗಿದೆ.
ಗ್ರಾಮ ಪಂಚಾಯ್ತಿ ಸಿಬ್ಬಂದಿ ಮತಾಂತರಗೊಂಡು, ಇತರರನ್ನು ಮತಾಂತರಕ್ಕೆ ಪ್ರಚೋದಿಸುತ್ತಿದ್ದಾರೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ. ಜೊತೆಗೆ ಗುಲ್ಲಹಳ್ಳಿ ಗ್ರಾಮ ಪಂಚಾಯ್ತಿಯ ಸ್ವಚ್ಚವಾಹಿನಿ ವಾಹನವನ್ನು ಖಾಸಗಿ ಹಾಗೂ ಧಾರ್ಮಿಕ ಚಟುವಟಿಕೆಗಳ ಪ್ರಚಾರಕ್ಕೆ ಬಳಸಲಾಗಿದೆ ಎಂಬ ಆರೋಪವೂ ಇದೆ.
ಸ್ವಚ್ಚವಾಹಿನಿ ವಾಹನದಲ್ಲಿದ್ದ ನೂರಾರು ಕರಪತ್ರಗಳನ್ನು ಸ್ಥಳೀಯರು ವಶಕ್ಕೆ ಪಡೆದಿದ್ದು, ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಘಟನೆ ಬೂದಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಕೆಲಸ ಬಿಡುತ್ತೇನೆ ಎಂದಿದ್ದಕ್ಕೆ ಯುವತಿಗೆ ಬಟ್ಟೆ ಬಿಚ್ಚಿ ಹೊಡಿತೀನಿ ಎಂದ ಮಾಲೀಕ!



















