ಬೀದರ್ : ಬೀದರ್‌ನಲ್ಲಿ ನಡೆಯುತ್ತಿರುವ ವೀರಲೋಕ ಪುಸ್ತಕ ಸಂತೆಗೆ ಕನ್ನಡ ಚಿತ್ರನಟ ನೆನಪಿರಲಿ ಪ್ರೇಮ್ ಭೇಟಿ ನೀಡಿ, ಕನ್ನಡ ಪುಸ್ತಕಗಳನ್ನು ಖರೀದಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಾನು ಬೀದರ್‌ಗೆ ಸಾಕಷ್ಟು ಬಾರಿ ಬಂದಿದ್ದೇನೆ. ಆದರೆ ಈ ರೀತಿಯ ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿ ಬರುತ್ತಿದ್ದೇನೆ. ಈ ಪುಸ್ತಕ ಸಂತೆ ನನ್ನ ನೆನಪಿನಲ್ಲಿ ಉಳಿಯುವಂತಹ ಕಾರ್ಯಕ್ರಮ ಎಂದು ಹೇಳಿದರು.

ವಾರಕ್ಕೊಂದು, ತಿಂಗಳಿಗೊಂದು ಸಂತೆ ನಡೆಯುವುದನ್ನು ಕೇಳಿರುತ್ತೇವೆ. ಅಲ್ಲಿ ತರಹೇವಾರಿ ತರಕಾರಿಗಳು ಸಿಗುತ್ತವೆ. ಆದರೆ ಇಲ್ಲಿ ಕನ್ನಡ ಪುಸ್ತಕಗಳನ್ನು ಪರಿಚಯಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಪುಸ್ತಕವನ್ನೆಲ್ಲರೂ ಪರಿಚಯಿಸಬೇಕು ಎಂಬ ಉದ್ದೇಶದಿಂದಲೇ ಈ ಪುಸ್ತಕ ಸಂತೆ ಆಯೋಜಿಸಲಾಗಿದೆ ಎಂದು ತಿಳಿಸಿದ ಅವರು, ಲಕ್ಷಾಂತರ ಪುಸ್ತಕಗಳು ಇಲ್ಲಿ ಲಭ್ಯವಿದ್ದು, ಪ್ರತಿಯೊಬ್ಬರೂ ಕನಿಷ್ಠ ಒಂದಾದರೂ ಕನ್ನಡ ಪುಸ್ತಕ ಖರೀದಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ, ಎಣ್ಣೆ, ಸಿಗರೇಟ್‌ಗೆ ಹಣ ಖರ್ಚು ಮಾಡುವುದನ್ನು ಬಿಟ್ಟು, ಕನ್ನಡ ಪುಸ್ತಕಗಳನ್ನು ಖರೀದಿಸಿದರೆ ಜೀವನವೇ ಬದಲಾಗುತ್ತದೆ ಎಂದು ನಟ ನೆನಪಿರಲಿ ಪ್ರೇಮ್ ಹೇಳಿದರು.
ಇದನ್ನೂ ಓದಿ : ಪರೀಕ್ಷೆ ಟೈಮಲ್ಲೇ ವಿದ್ಯಾರ್ಥಿಗಳಿಗೆ ಬಂಪರ್ ಆಫರ್… ಸರ್ಕಾರಿ ಶಾಲೆಯ SSLC ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಭಾಗ್ಯ!



















