ಬೆಂಗಳೂರು: ವಿದ್ಯುತ್ ಚಾಲಿತ ಕಾರುಗಳ ತಯಾರಿಕೆಗಾಗಿ ಜಾಗತಿಕ ಖ್ಯಾತಿ ಗಳಿಸಿರುವ, ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯಲ್ಲಿ ಇಂಟರ್ನ್ ಶಿಪ್ ಮಾಡಲು ಒಳ್ಳೆಯ ಅವಕಾಶ ಲಭಿಸಿದೆ. ಹೌದು, ಬೆಂಗಳೂರು ಸೇರಿ ದೇಶದ ಹಲವೆಡೆ ಇರುವ ಟೆಸ್ಲಾ ಕಚೇರಿಗಳಲ್ಲಿ ಇಂಟರ್ನ್ ಶಿಪ್ ಕೈಗೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಇಂಟರ್ನ್ ಶಿಪ್ ಅವಧಿಯಲ್ಲಿ ಅಭ್ಯರ್ಥಿಗಳು ಗ್ರಾಹಕರೊಂದಿಗೆ ಸಂವಹನ ನಡೆಸುವುದು, ಗ್ರಾಹಕರ ಪ್ರೊಫೈಲ್ಗಳನ್ನು ತಯಾರಿಸುವುದು, ಟೆಸ್ಲಾ ಉತ್ಪನ್ನಗಳು ಮತ್ತು ಸೇವೆಗಳ ಕುರಿತು ಮಾಹಿತಿ ನೀಡುವುದು ಹಾಗೂ ಟೆಸ್ಟ್ ಡ್ರೈವ್ ಗಳನ್ನು ನಿಗದಿಪಡಿಸುವುದರಲ್ಲಿ ನೆರವು ನೀಡಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಇದರೊಂದಿಗೆ ಜಾಗತಿಕ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಇದು ನೆರವಾಗಲಿದೆ ಎಂದು ತಿಳಿದುಬಂದಿದೆ.
ಎಲ್ಲೆಲ್ಲಿ ಇಂಟರ್ನ್ ಶಿಪ್?
ಬೆಂಗಳೂರು, ಹೈದರಾಬಾದ್, ಪುಣೆ, ಚೆನ್ನೈ, ದೆಹಲಿ, ಗುರುಗ್ರಾಮ ಹಾಗೂ ಅಹಮದಾಬಾದ್ ನಲ್ಲಿ ಇಂಟರ್ನ್ ಶಿಪ್ ಮಾಡಬಹುದಾಗಿದೆ. ಈಗಾಗಲೇ ಪದವಿ ಅಧ್ಯಯನ ಮಾಡುತ್ತಿರುವವರು ಅಥವಾ ಕಳೆದ ಸಾಲಿನಲ್ಲಿ ಪದವಿ ಮುಗಿಸಿದವರು ಅರ್ಜಿಗಳನ್ನು ಸಲ್ಲಿಸಲು ಅರ್ಹರಾಗಿದ್ದಾರೆ. ಅರ್ಜಿ ಸಲ್ಲಿಸುವವರ ಬಳಿ ವಾಹನ ಚಾಲನಾ ಪರವಾನಗಿ ಇರಬೇಕು ಎಂದು ತಿಳಿಸಲಾಗಿದೆ. ಇದೇ ವೇಳೆ ಸ್ಟೈಪೆಂಡ್ ಕೂಡ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಅರ್ಜಿ ಸಲ್ಲಿಸುವುದು ಹೇಗೆ?
• ಟೆಸ್ಲಾ ಅಧಿಕೃತ ವೆಬ್ ಸೈಟ್ ಆಗಿರುವ https://hire-r1.mokahr.com/social-recruitment/tesla/100004099#/ ಗೆ ಭೇಟಿ ನೀಡಿ.
• ಸರ್ಚ್ ಬಾರ್ ನಲ್ಲಿ Internship ಎಂದು ಹುಡುಕಿ
• ನಿಮ್ಮ ಆಸಕ್ತಿ ಮತ್ತು ಅರ್ಹತೆಗೆ ಅನುಗುಣವಾದ ಹುದ್ದೆಯನ್ನು ಆಯ್ಕೆ ಮಾಡಿ.
• ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ನಿಮ್ಮ ಇತ್ತೀಚಿನ Resume ಅಪ್ಲೋಡ್ ಮಾಡಿ.
ಇದನ್ನೂ ಓದಿ: ಅಟಲ್ ಪಿಂಚಣಿ ಯೋಜನೆ ವಿಸ್ತರಿಸಿದ ಕೇಂದ್ರ ಸರ್ಕಾರ | ಜನರಿಗೆ ಏನಿದೆ ಉಪಯೋಗ?



















