ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ, ನಮ್ಮ ಬೆಂಗಳೂರಿನಲ್ಲೇ ಇರುವ ರಾಮನ್ ರಿಸರ್ಚ್ ಇನ್ ಸ್ಟಿಟ್ಯೂಟ್ ನಲ್ಲಿ ಖಾಲಿ ಇರುವ 2 ಹುದ್ದೆಗಳ ನೇಮಕಾತಿಗಾಗಿ (RRI Recruitment 2026) ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಲೈಬ್ರೇರಿಯನ್ ಹಾಗೂ ಸೈಂಟಿಸ್ಟ್ ಎ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ರಾಮನ್ ರಿಸರ್ಚ್ ಇನ್ ಸ್ಟಿಟ್ಯೂಟ್
ಒಟ್ಟು ಹುದ್ದೆಗಳು: 03
ಹುದ್ದೆಗಳ ಹೆಸರು: ರಿಸರ್ಚ್ ಅಸಿಸ್ಟಂಟ್
ಉದ್ಯೋಗ ಸ್ಥಳ: ಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 13
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಲ್ಲಿ ಬಿ.ಇ, ಬಿ.ಟೆಕ್, ಎಂ.ಇ, ಎಂ.ಟೆಕ್, ಎಂಎಸ್ಸಿ ಕೋರ್ಸ್ ಮುಗಿಸಿದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ. ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಇದಾದ ಬಳಿಕ ವೈಯಕ್ತಿಕ ಸಂದರ್ಶನಕ್ಕೆ ಕರೆದು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಗರಿಷ್ಠ 35 ವರ್ಷದೊಳಗಿನವರು ಅರ್ಜಿಗಳನ್ನು ಸಲ್ಲಿಸಲು ಅರ್ಹರಾಗಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ rri.res.in ವೆಬ್ ಸೈಟ್ ಗೆ ಭೇಟಿ ನೀಡಬೇಕು
ನಿಮಗೆ ಬೇಕಾದ ಹುದ್ದೆ ಆಯ್ಕೆ ಮಾಡಿಕೊಳ್ಳಬೇಕು
ಅರ್ಜಿ ಸಲ್ಲಿಕೆ ಕುರಿತ ಅಧಿಸೂಚನೆ ಓದಿಕೊಳ್ಳಬೇಕು
ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು
ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು
ಫ್ಯೂಚರ್ ರೆಫರೆನ್ಸಿಗಾಗಿ ಅರ್ಜಿಯನ್ನು ಡೌನ್ ಲೋಡ್ ಮಾಡಿಟ್ಟುಕೊಂಡಿರಬೇಕು
ಇದನ್ನೂ ಓದಿ: ಕೇಂದ್ರ ಸರ್ಕಾರದ STPI ಸಂಸ್ಥೆಯಲ್ಲಿ ಆಫೀಸರ್ ಹುದ್ದೆಯ ನೇಮಕ | 2 ಲಕ್ಷ ರೂ. ಸ್ಯಾಲರಿ



















