ಬೆಂಗಳೂರು: ರಥಸಪ್ತಮಿ ಹಬ್ಬದ ಪ್ರಯುಕ್ತ ಪ್ರಗತಿ ಯುವಕ ಸಂಘ (ರಿ) ಇವರ ವತಿಯಿಂದ ಶ್ರೀ ವೆಂಕಟೇಶ್ವರ ಸ್ವಾಮಿಯ ಉತ್ಸವ ಹಾಗೂ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇದೇ ಜ.25ರ ಭಾನುವಾರದಂದು ನಗರದ ಆಡುಗೋಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು ಸಂಘದ 39ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯಲಿದ್ದು, ಬೆಳಗ್ಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ಅದೇ ದಿನ ಸಂಜೆ ಸಂಜೆ 6-00 ಗಂಟೆಗೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಹಾಗೂ ರಾತ್ರಿ 7-00 ಗಂಟೆಗೆ ರಸಮಂಜರಿ ಕಾರ್ಯಕ್ರಮವನ್ನು ಪ್ರಗತಿ ಯುವಕರ ಸಂಘದ ವತಿಯಿಂದ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ವಹಿಸಲಿದ್ದು, ಗೌರವಾನ್ವಿತ ಅತಿಥಿಗಳಾಗಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಪ್ರದಾನ ಕಾರ್ಯದರ್ಶಿ ಸೌಮ್ಯರೆಡ್ಡಿ, ಬೆಂಗಳೂರು ನಗರ ಪ್ರದಾನ ಕಾರ್ಯದರ್ಶಿ (ಕಾಂಗ್ರೆಸ್) ಹಾಗೂ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು ವಿ.ಎಸ್.ಪ್ಯಾಟ್ರಿಕ್ ರಾಜು ಭಾಗಿಯಾಗಲಿದ್ದು, ಇವರೊಂದಿಗೆ ಮುರುಗೇಶ್ ಮೊದಲಿಯಾರ್ಮಾ, ಆರ್.ವೆಂಕಟೇಶ್, ಕೆ.ಮಂಜುನಾಥ್ (ಎಸ್.ಡಿ.ಡಿ), ಎಸ್. ಆನಂದ್, ಇರ್ಫಾನ್ ರಜಾಕ್, ಮಂಜುನಾಥ್, ಚಂದ್ರಪ್ಪ, ವಿ. ಸುದರ್ಶನ್ ಬಾಬು, ಅನಂತ ಪದ್ಮನಾಭ, ಎಂ.ಎಸ್. ಮುನಿರಾಜು, ಮಂಜುನಾಥ್ ಲಾರ್ಡ್ಸ್, ಜಯದೇವ್, ಸತೀಶ್ ಕೆ.ಎಂ.ಎಸ್, ಶಶಿಕುಮಾರ್ ತಿಮ್ಮಯ್ಯ, ಟಿ. ಮಂಜುನಾಥ್, ವಿ. ಹೇಮಾವತಿ ಹಾಗೂ ಹಲವು ಗಣ್ಯರು ಭಾಗಿಯಾಗಲಿದ್ದಾರೆ.
ಅಂತೆಯೇ ಹರೀಶ್ ಬಾಬು, ನವೀನ್ ಕುಮಾರ್, ಧನಂಜಯ ರೆಡ್ಡಿ, ವಾಸುದೇವ್ ರೆಡ್ಡಿ, ನಾಗಭೂಷಣ್ ರೆಡ್ಡಿ, ಗೋವರ್ಧನ್ (ಅಭಿ), ಡಿ.ವಿ. ಲಕ್ಷ್ಮೀ, ಪ್ರದೀಪ್, ಎ.ಆರ್. ರಮೇಶ್, ಆಂಜನೇಯಲು, ಪಿ. ಚಂದ್ರಶೇಖರ್, ಹೆನ್ರಿ ಕುಮಾರ್, ಡಿ. ಶೇಖರ್, ಮಹಾದೇವ, ಶಿವರಾಮಯ್ಯ ಹಾಗೂ ಇನ್ನಿತರರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ: ಮುದ್ದುಗುಮ್ಮ ಆಗಿಬಿಟ್ರಾ ‘ಡೈನಾಮಿಕ್-ಪ್ರಿನ್ಸ್’..?



















