ಚಿಕ್ಕಮಗಳೂರು : ಕೆಎಸ್‌ಆರ್‌ಟಿಸಿ ಬಸ್ ದಾರಿ ಮಧ್ಯೆ ಏಕಾಏಕಿ ಕೆಟ್ಟು ನಿಂತು ಪ್ರಯಾಣಿಕರು ಪರಾದಾಡಿದ ಸ್ಥಿತಿಯು ಚಿಕ್ಕಮಗಳೂರು ತಾಲೂಕಿನ ಕೈಮರ ಸಮೀಪ ದೇವೀರಮ್ಮ ದೇವಸ್ಥಾನಕ್ಕೆ ತೆರಳುವಾಗ ಸಂಭವಿಸಿದೆ.
ಬಸ್ ಕೆಟ್ಟು ನಿಂತ ಪರಿಣಾಮ ಚಾಲಕ ಹಾಗೂ ನಿರ್ವಾಹಕರು ತೀವ್ರ ಪರದಾಡಿದ್ದಾರೆ. ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದೆ ಪ್ರಯಾಣಿಕರನ್ನು ದಾರಿ ಮಧ್ಯದಲ್ಲೇ ಇಳಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣಿಕರು ಬಸ್ ಅನ್ನು ತಳ್ಳುವ ಪರಿಸ್ಥಿತಿ ಎದುರಾಗಿದೆ.
ದೇವೀರಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರು ಬಸ್ ಕೆಟ್ಟಿದ್ದರಿಂದ ತೀವ್ರ ತೊಂದರೆ ಅನುಭವಿಸಿದರು. ಘಟನೆಯಿಂದ ಪ್ರಯಾಣಿಕರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಕೆಎಸ್‌ಆರ್‌ಟಿಸಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಿರಂತರ ಬಸ್‌ಗಳ ನಿರ್ವಹಣಾ ಲೋಪವೇ ಈ ಘಟನೆಗೆ ಕಾರಣ ಎನ್ನಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಭಾರತದಲ್ಲಿ ಬಾಂಗ್ಲಾದೇಶಿಗರ ಭಾನಗಡಿ, ಎಲ್ಲೆಲ್ಲಿ ವಾಸ..? ಕೇಂದ್ರಕ್ಕೆ ಎನ್.ಆರ್ ರಮೇಶ್ ‘ಸ್ಟಿಂಗ್ ಆಪರೇಷನ್’ ರಿಪೋರ್ಟ್..!



















