ಬೆಂಗಳೂರು: ಲಂಡನ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾದ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆ ಇಂದಿನಿಂದ ಬೆಂಗಳೂರಿನಲ್ಲಿ ಅಧಿಕೃತವಾಗಿ ಆರಂಭಗೊಂಡಿದೆ. ರವೀಂದ್ರ ಕಲಾಕ್ಷೇತ್ರದ ಮುಂಭಾಗ ನೂತನ ಡಬಲ್ ಡೆಕ್ಕರ್ ಬಸ್‌ಗೆ ಸಚಿವ ಹೆಚ್.ಕೆ. ಪಾಟೀಲ್ ಚಾಲನೆ ನೀಡಿದರು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ವತಿಯಿಂದ ಒಟ್ಟು 03 ಡಬಲ್ ಡೆಕ್ಕರ್ ಬಸ್‌ಗಳನ್ನು ಆರಂಭಿಕ ಹಂತದಲ್ಲಿ ಬೆಂಗಳೂರಿನಲ್ಲಿ ಸಂಚರಿಸಲು ನಿರ್ಧರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ವಿಶಿಷ್ಟ ನಗರ ದರ್ಶನ ಅನುಭವ ನೀಡುವ ಗುರಿ ಹೊಂದಲಾಗಿದೆ.

ಮೈಸೂರು ದಸರಾ ಮಹೋತ್ಸವದ ವೇಳೆ ಜನಪ್ರಿಯವಾಗಿದ್ದ ಈ ಲಂಡನ್ ಮಾದರಿಯ ತೆರೆದ ಡಬಲ್ ಡೆಕ್ಕರ್ ಬಸ್‌ಗಳು ಇದೀಗ ಬೆಂಗಳೂರಿಗೆ ಬರುವ ದೇಶೀಯ ಹಾಗೂ ವಿದೇಶೀಯ ಪ್ರವಾಸಿಗರಿಗೆ ಸೇವೆ ಒದಗಿಸಲಿವೆ.

ಮುಖ್ಯಮಂತ್ರಿಯವರ ಆಯವ್ಯಯ ಭಾಷಣದಲ್ಲಿ, ವಿಶ್ವವಿಖ್ಯಾತ ಹಂಪಿ ಮತ್ತು ಮೈಸೂರು ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಲಂಡನ್ ಬಿಗ್ ಬಸ್ ಮಾದರಿಯ 06 ಡಬಲ್ ಡೆಕ್ಕರ್ ತೆರೆದ ಬಸ್‌ಗಳನ್ನು ಆರಂಭಿಸಲು ರೂ.5 ಕೋಟಿ ಅನುದಾನ ನೀಡಲಾಗಿತ್ತು. ಅದರಂತೆ ಸರ್ಕಾರದಿಂದ ಬಸ್‌ಗಳನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಲಾಗಿತ್ತು.
ಈ 06 ಡಬಲ್ ಡೆಕ್ಕರ್ ಬಸ್‌ಗಳನ್ನು ಮೊದಲು ಮೈಸೂರು ನಗರದಲ್ಲಿ ನಿಗದಿತ ಪ್ರವಾಸಿ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಮೈಸೂರು ದಸರಾ ಸಂದರ್ಭದಲ್ಲೂ ಯಶಸ್ವಿಯಾಗಿ ಬಳಸಿಕೊಳ್ಳಲಾಗಿತ್ತು. ಬಳಿಕ ಒಂದು ಬಸ್ ಅನ್ನು ಹಂಪಿ ಪ್ರವಾಸಕ್ಕೆ ನಿಯೋಜಿಸಲಾಗಿತ್ತು. ಆದರೆ ಹಂಪಿಯ ರಸ್ತೆ ಮಾರ್ಗಗಳು ಸೀಮಿತವಾಗಿರುವ ಕಾರಣ ಡಬಲ್ ಡೆಕ್ಕರ್ ಬಸ್ ಕಾರ್ಯಾಚರಣೆ ಸಾಧ್ಯವಾಗದೆ ಉಳಿದಿದೆ.
ಮೈಸೂರಿನಲ್ಲಿ 06 ಬಸ್‌ಗಳ ಪೈಕಿ 03 ಬಸ್‌ಗಳನ್ನು ಮುಂದುವರೆಸಿ ಬಳಸಿಕೊಳ್ಳಲಾಗಿದ್ದು, ಉಳಿದ 03 ಬಸ್‌ಗಳನ್ನು ಬೆಂಗಳೂರು ನಗರ ಪ್ರವಾಸೋದ್ಯಮವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಲಂಡನ್ ಮಾದರಿಯಲ್ಲಿ ಪ್ರಯೋಗಾತ್ಮಕವಾಗಿ ಬೆಂಗಳೂರಿನಲ್ಲಿ ಸಂಚರಿಸಲು ತೀರ್ಮಾನಿಸಲಾಗಿದೆ.
ಬೆಂಗಳೂರಲ್ಲಿ ಎಲ್ಲೆಲ್ಲಿ ಸಂಚರಿಸುತ್ತದೆ?
ಪ್ರಸ್ತುತ ಬೆಂಗಳೂರಿನಲ್ಲಿ ರವೀಂದ್ರ ಕಲಾಕ್ಷೇತ್ರ ಕಾರ್ಪೋರೇಷನ್ ಸರ್ಕಲ್-ಹಡ್ನನ್ ಸರ್ಕಲ್-ಕಸ್ತೂರ ಬಾ ರಸ್ತೆ-ವಿಶ್ವೇಶ್ವರಯ್ಯ ಮ್ಯೂಸಿಯಂ-ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಅಂಚೆ ಕಛೇರಿ ನ್ಯಾಯಾಲಯ/ವಿಧಾನಸೌಧ – ಕೆ ಆರ್ ಸರ್ಕಲ್- ಹಡ್ನನ್ ಸರ್ಕಲ್ – ಕಾರ್ಪೋರೇಷನ್ ಸರ್ಕಲ್- ರವೀಂದ್ರ ಕಲಾ ಕ್ಷೇತ್ರ ಕಾರ್ಯಾಚರಣೆಯಚರಣೆ ಮಾಡಲಾಗುವುದು.
ಈ ಮೇಲಿನ ಮಾರ್ಗಗಳಲ್ಲಿ ಸಂಚರಿಸಲು ಒಂದು ದಿನಕ್ಕೆ ಪ್ರತಿ ವ್ಯಕ್ತಿಗೆ 180ರೂ ದರ ನಿಗದಿ ಪಡಿಸಲಾಗಿದೆ. ಪ್ರತಿ ಬಸ್‌ನಲ್ಲಿ ಅಪ್ಪರ್ ಡೆಕ್‌ನಲ್ಲಿ 20 ಸಂಖ್ಯೆ ಆಸನಗಳು ಹಾಗೂ ಲೋಯರ್ ಡೆಕ್‌ನಲ್ಲಿ 20 ಸಂಖ್ಯೆಯ ಆಸನಗಳು ಲಭ್ಯವಿರುತ್ತದೆ.
ಇದನ್ನೂ ಓದಿ : ಅಕ್ರಮ ರೆಸಾರ್ಟ್ಸ್ ತೆರವಿಗೆ ಆಗ್ರಹ | 2ನೇ ದಿನವೂ ಮೈಸೂರಿನಲ್ಲಿ ಮುಂದುವರಿದ ಪ್ರತಿಭಟನೆ



















