ಬೆಂಗಳೂರು: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗಾಗಿ ಮತ್ತೊಂದು ಹೊಸ ಮಾರ್ಗ ಸಿದ್ಧವಾಗುತ್ತಿದ್ದು, ನಗರದ ಬಹುನಿರೀಕ್ಷಿತ ಪಿಂಕ್ ಲೈನ್ ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.

ಪಿಂಕ್ ಲೈನ್ ಮಾರ್ಗದ ಡ್ರೋನ್ ವಿಡಿಯೋ ಇದೀಗ ಬಿಡುಗಡೆಯಾಗಿದ್ದು, ಕಾಮಗಾರಿಗಳ ಪ್ರಗತಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೊದಲ ಹಂತದ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಟ್ರಯಲ್ ರನ್ ಆರಂಭಿಸಲಾಗಿದೆ.

ಮುಂದಿನ ಮೂರ್ನಾಲ್ಕು ತಿಂಗಳೊಳಗೆ ಪ್ರಯಾಣಿಕರ ಸಂಚಾರಕ್ಕೆ ಮಾರ್ಗವನ್ನು ತೆರೆಯುವ ಸಾಧ್ಯತೆ ಇದ್ದು, ಎರಡು ಹಂತಗಳಲ್ಲಿ ಸಂಚಾರ ಆರಂಭಿಸಲು ಮೆಟ್ರೋ ನಿಗಮ ಯೋಜನೆ ರೂಪಿಸಿದೆ.
ಈಗ ಬಿಡುಗಡೆಗೊಂಡಿರುವ ಡ್ರೋನ್ ವಿಡಿಯೋದಲ್ಲಿ ಕಾಳೇನಾ ಅಗ್ರಹಾರದಿಂದ ತಾವರೆಕೆರೆ ನಡುವಿನ ಪಿಂಕ್ ಲೈನ್ ಮಾರ್ಗ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಈ ಪಿಂಕ್ ಲೈನ್ ಕಾರ್ಯಾರಂಭದಿಂದ ದಕ್ಷಿಣ ಹಾಗೂ ಮಧ್ಯ ಬೆಂಗಳೂರಿನ ಸಂಚಾರ ಸಮಸ್ಯೆ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಲ್ಯಾಂಬೋರ್ಗಿನಿ ಕಾರಿನ ಹುಚ್ಚಾಟ | ನಡು ರಸ್ತೆಯಲ್ಲೇ ರೇಸ್ ; ಡರ್ರ್.. ಡರ್ರ್.. ಶಬ್ಧಕ್ಕೆ ವಾಹನ ಸವಾರರು ತಬ್ಬಿಬ್ಬು!



















