ಬೆಳಗಾವಿ : ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದಡಿ ಹಿಂದೂ ಕಾರ್ಯಕರ್ತೆ ಮೇಲೆ ಎಫ್ಐಆರ್ ದಾಖಲಾಗಿರುವ ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಹಾರಾಷ್ಟ್ರ ಮೂಲದ ಹಿಂದೂ ಕಾರ್ಯಕರ್ತೆ ಹರ್ಷಿತಾ ಠಾಕೂರ್ ವಿರುದ್ಧ ದೂರು ದಾಖಲು. ಈಕೆಯು ಅನ್ಸಾರಿ ದರ್ಗಾದ ಮೇಲೆ ಬಾಣದಿಂದ ಹೊಡೆಯುವ ರೀತಿ ಕೈಸನ್ನೆ ಮಾಡಿದ್ದು, ಅಲ್ಲದೇ ಧಾರ್ಮಿಕ ಭಾವನೆಗೆ ಕೆರಳಿಸುವ ರೀತಿಯಲ್ಲಿ ಭಾಷಣ ಮಾಡಿರುವ ಆರೋಪ ಕೇಳಿಬಂದಿದ್ದು, ಪ್ರಕರಣ ದಾಖಲಾಗಿದೆ.
ಅಬ್ದುಲ್ ಖಾದರ್ ಮುಜಾವರ ಹಿಂದೂ ಕಾರ್ಯಕರ್ತೆ ವಿರುದ್ಧ ದೂರು ನೀಡಿದ್ದು, ಈ ಘಟನೆಯೂ ಮಚ್ಚೆ ಗ್ರಾಮದಲ್ಲಿ ನಿನ್ನೆ(ಜ.18) ಆಯೋಜಿಸಿದ ಶೋಭಾಯಾತ್ರೆಯಲ್ಲಿ ನಡೆದಿದೆ.
ಇದ್ನೂ ಓದಿ : ಪರ್ಯಾಯ ಮೆರವಣಿಗೆಗೆ ಕೇಸರಿ ಧ್ವಜ ಹಿಡಿದು ಚಾಲನೆಗೆ ಟೀಕೆ | ಉಡುಪಿ ಡಿಸಿ ಸ್ವರೂಪ ಟಿ.ಕೆ ಸ್ಪಷ್ಟನೆ



















