ಮಂಡ್ಯ : ಇಂದು ಕನ್ನಡದ ಜನಪ್ರಿಯ ರಿಯಲಿಟಿ ಶೋ ಬಿಗ್ಬಾಸ್ ಮುಕ್ತಾಯಗೊಳಲಿದ್ದು, ಎಲ್ಲೆಡೆ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ಮಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ಸ್ಪರ್ಧಿಗಳಾದ ಗಿಲ್ಲಿನಟ ಮತ್ತು ಕಾವ್ಯಾ ಅವರ ಫೋಟೊವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾನೆ.
ಮಂಡ್ಯ ತಾಲ್ಲೂಕು ಬಿಳಿದೇಗಲು ಗ್ರಾಮದ ಲವ ಎಂಬಾತ ತಮ್ಮ ಎರಡೂ ತೋಳಿಗೂ ಗಿಲ್ಲಿನಟ ಮತ್ತು ಕಾವ್ಯಾ ಅವರ ಭಾವಚಿತ್ರವನ್ನು ಟ್ಯಾಟೂ ಹಾಕಿಸಿ, ಹೆಸರು ಬರೆಸಿಕೊಂಡ ತನ್ನ ಅಭಿಮಾನವನ್ನು ಮೆರೆದಿದ್ದಾನೆ.
ಬಿಗ್ ಬಾಸ್-12 ಇನ್ನೇನು ಗ್ರ್ಯಾಂಡ್ ಫಿನಾಲೆಯ ಹೊಸ್ತಿಲಲ್ಲಿದ್ದು, ಗಲ್ಲಿಗಲ್ಲಿಯಲ್ಲಿಯೂ ಗಿಲ್ಲಿಯದ್ದೇ ಹೆಸರು ಕೇಳಿ ಬರುತ್ತಿದೆ. ಹಾಗಾದರೇ ಬರೋಬ್ಬರಿ 37 ಕೋಟಿ ವೋಟ್ಸ್ ಯಾರ ಪಾಲೆಂದು ಗೊತ್ತಾಗಬೇಕಿದೆ.
ಇದನ್ನೂ ಓದಿ; 37 ಕೋಟಿ ವೋಟ್ ಅವನಿಗೇ ಬಿದ್ದಿದೆ | ಹನುಮಂತನ ಪ್ರಕಾರ ಇವರಂತೆ ವಿನ್ನರ್



















