ಚಾಮರಾಜನಗರ : ನಂಜೇದೇವನಪುರ ಬಳಿ ತಾಯಿ ಹಾಗೂ ನಾಲ್ಕು ಮರಿ ಹುಲಿಗಳು ಕಾಣಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಗಂಡು ಹುಲಿ ಮರಿ ಸೆರೆಯಾಗಿದೆ.
ಸಾಕಾನೆ ಬಳಸಿ ಕಾರ್ಯಾಚರಣೆ ನಡೆಸಿ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿ ಮರಿಯನ್ನು ಸೆರೆ ಹಿಡಿಯಲಾಗಿದೆ. ಈಗಾಗಲೇ ತಾಯಿ ಹಾಗೂ ಒಂದು ಹೆಣ್ಣು ಹುಲಿ ಮರಿಯನ್ನು ಸೆರೆ ಹಿಡಿಯಲಾಗಿತ್ತು. ಇನ್ನೂ ಉಳಿದ ಹುಲಿ ಮರಿಗಳು ಆನೆಮಡುವಿನ ಕೆರೆ ಹಿಂಭಾಗ ಬೀಡು ಬಿಟ್ಟಿವೆ.
ಉಳಿದಿರುವ ಎರಡು ಹುಲಿ ಮರಿಗಳ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ. ಉಳಿದ ಮರಿಗಳನ್ನೂ ಹಿಡಿಯುವ ಕೆಲಸ ಮಾಡಬೇಕು ಇಲ್ಲವಾದರೆ ರೈತರು ನಿತ್ಯ ಆತಂಕದಲ್ಲಿ ದಿನದೂಡುವ ಪರಿಸ್ಥಿತಿ ಎದುರಾಗುತ್ತದೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಮಣಿಪುರ ಗ್ಯಾಂಗ್‌ರೇಪ್ ಸಂತ್ರಸ್ತೆ ಸಾವು | ನ್ಯಾಯಕ್ಕಾಗಿ ಕಾಯುತ್ತಲೇ ಕೊನೆಯುಸಿರೆಳೆದ ಕುಕಿ ಯುವತಿ



















