ಉಡುಪಿ : ಶಿರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥರ ಪ್ರಥಮ ಪರ್ಯಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ, ಕಳೆದ ಕೆಲ ದಿನಗಳಿಂದ ಹೊರೆಕಾಣಿಕೆಗಳ ಮಹಾಪೂರವೇ ಉಡುಪಿ ಕೃಷ್ಣ ಮಠದತ್ತ ಹರಿದು ಬರುತ್ತಿದ್ದು, ವಿವಿಧ ಸಂಘ, ಸಂಸ್ಥೆಗಳು ಬಗೆಬಗೆಯೆ ಹೊರೆಕಾಣಿಕೆಗಳನ್ನು ಮಠಕ್ಕೆ ಸಮರ್ಪಿಸುತ್ತಿವೆ.

ಈ ಕಾಣಿಕೆಯನ್ನು ಪರ್ಯಾಯ ಮಹೋತ್ಸವ ಸಂದರ್ಭ ಹಾಗೂ ಮುಂದಿನ ಎರಡು ವರ್ಷಗಳ ಕಾಲ ಮಠಕ್ಕೆ ಬರುವ ಲಕ್ಷಾಂತರ ಭಕ್ತರ ಅನ್ನಪ್ರಸಾದಕ್ಕೆ ಬಳಸಲಾಗುತ್ತದೆ.

ಇದುವರೆಗೆ ಕೃಷ್ಣ ಮಠಕ್ಕೆ ಬಂದಿರುವ ಹೊರೆಕಾಣಿಕೆಗಳಲ್ಲಿ 5,000 ಕೆಜಿಗೂ ಹೆಚ್ಚು ಅಕ್ಕಿ, 40,000 ಕೆಜಿ ಬೆಲ್ಲ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. ಉಡುಪಿ ಶ್ರೀಕೃಷ್ಣ ದೇವರ ಪೂಜಾಧಿಕಾರ ಶಿರೂರು ಮಠಕ್ಕೆ ಹಸ್ತಾಂತರಗೊಳ್ಳುವ ಹಿನ್ನೆಲೆಯಲ್ಲಿ ನಾಡಹಬ್ಬವಾಗಿ ಪರ್ಯಾಯ ಮಹೋತ್ಸವ ನಡೆಯುತ್ತಿದೆ.
ಪ್ರತಿ ದಿನ ಮೆರವಣಿಗೆ ರೂಪದಲ್ಲಿ ಶಿರೂರು ಮಠಕ್ಕೆ ಹೊರೆ ಕಾಣಿಕೆ ಸಮರ್ಪಣೆ ಆಗುತ್ತಿದೆ. ಮಠಕ್ಕೆ ಹೊರೆ ಕಾಣಿಕೆ ರೂಪದಲ್ಲಿ ಅಕ್ಕಿ, ಬೆಲ್ಲ, ಸಕ್ಕರೆ, ತೆಂಗಿನಕಾಯಿ, ಮೆಣಸು, ತರಕಾರಿ.. ಹೀಗೆ ದವಸ-ಧಾನ್ಯಗಳನ್ನು ಭಕ್ತರು ಕೊಡುತ್ತಿದ್ದಾರೆ.
ಇದನ್ನೂ ಓದಿ : 88 ಕ್ರಿಮಿನಲ್ ಕೇಸ್‌ಗಳಲ್ಲಿ ಪೊಲೀಸರೇ ಶಾಮೀಲಾಗಿರುವುದು ನಾಚಿಗೇಡಿನ ವಿಷಯ | ಸಿಎಂ ಸಿದ್ದರಾಮಯ್ಯ ಆಕ್ರೋಶ!



















