ಬೆಂಗಳೂರು: ರಾಜಧಾನಿಯಲ್ಲಿ ಅಚ್ಚರಿಯ ರೀತಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಕಳ್ಳರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹುಡುಗರ ರೀತಿ ಡ್ರೆಸ್ ಮಾಡಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಹುಡುಗಿಯರನ್ನು ಬಂಧಿಸಲಾಗಿದೆ.
ಟ್ಯಾನರಿ ರಸ್ತೆಯ ನಿವಾಸಿಗಳಾದ ಶಾಲು ಮತ್ತು ನೀಲು ಬಂಧಿತ ಆರೋಪಿಗಳು. ಇದೇ ಜ.13 ರಂದು ಸಂಪಿಗೇಹಳ್ಳಿಯ ಸಂಗಮೇಶ್ ಎನ್ನುವವರ ಮನೆಯಲ್ಲಿ ಕಳ್ಳತನವಾಗಿತ್ತು. ಸ್ಥಳಕ್ಕೆ ಹೋದ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ ವೇಳೆ ಇಬ್ಬರು ಹುಡುಗರು ನಡೆದುಕೊಂಡು ಹೋಗುವುದು ಪತ್ತೆಯಾಗಿತ್ತು. ಸಿಸಿಟಿವಿ ಬೆನ್ನತ್ತಿ ಆರೋಪಿಗಳನ್ನು ವಶಕ್ಕೆ ಪಡೆದ ವೇಳೆ ಅದು ಹುಡುಗರಲ್ಲ, ಹುಡುಗಿಯರು ಎನ್ನುವ ಅಘಾತಕಾರಿ ವಿಷಯ ಬಯಲಾಗಿದೆ.
ಹುಡುಗರ ರೀತಿ ಪ್ಯಾಂಟ್ ಶರ್ಟ್, ಟೋಪಿ ಹಾಕಿಕೊಂಡು ಬೈಕ್ ನಲ್ಲಿ ಓಡಾಟ ಮಾಡುತ್ತಿದ್ದರು. ನಿರ್ಜನ ಪ್ರದೇಶದ ಮನೆಗಳಲ್ಲಿ ಹಾಡುಹಗಲೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು. ಸದ್ಯ ಸಂಪಿಗೇಹಳ್ಳಿ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ; ಕೋಲಾರದಲ್ಲಿ ರಾಸಾಯನಿಕ ವಸ್ತು ಬಳಸಿ ನಕಲಿ ಹಾಲು ತಯಾರಿಕೆ | ಐವರು ಆರೋಪಿಗಳ ಬಂಧನ!


















