ಮೈಸೂರು : ದೇಶದೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಖುಷಿ ಹಂಚಿಕೊಳ್ಳುತ್ತಿದ್ದಾರೆ. ಅದರಂತೆ, ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸುಂದರ ವಿಡಿಯೋ ಹಂಚಿಕೊಂಡಿದ್ದಾರೆ.

ಪ್ರತೀ ವರ್ಷ ಅದ್ಧೂರಿಯಾಗಿ ಸಂಕ್ರಾಂತಿ ಆಚರಿಸುತ್ತಿದ್ದ ದರ್ಶನ್ ಅವರಿಂದು ಜೈಲುವಾಸ ಅನುಭವಿಸುತ್ತಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದು, ಅವರ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮಿ ಹಬ್ಬವನ್ನು ಆಚರಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕ್ಯೂಟ್ ವಿಡಿಯೋ ಹಂಚಿಕೊಂಡು ಗಮನ ಸೆಳೆದಿದ್ದಾರೆ.

ತಮ್ಮ ವಿಡಿಯೋ ಪೋಸ್ಟ್ಗೆ ”ಪ್ರಾಣಿಯ ಕಣ್ಣುಗಳು ನೀವು ಯಾರೆಂಬ ನಿಜವಾದ ಆವೃತ್ತಿಯನ್ನು ಪ್ರತಿಬಿಂಬಿಸುತ್ತವೆ” ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ಗೆ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ.
‘ನನ್ನ ಪ್ರೀತಿಯ ಡಿ ಬಾಸ್ ಮತ್ತು ಅತ್ತಿಗೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು’ ಎಂದು ಫ್ಯಾನ್ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವರು ಪ್ರತಿಕ್ರಿಯಿಸಿ, ‘ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಅತ್ತಿಗೆ. ಬಾಸ್ ಇಲ್ಲ ಅನ್ನೋದೇ ಒಂದು ಬೇಜಾರು. ಬಾಸ್ ಬೇಗ ಹೊರಗಡೆ ಬರ್ತಾರೆ’ ಎಂದು ಧೈರ್ಯ ತುಂಬಿದ್ದಾರೆ. ವಿಡಿಯೋಗೆ ರಿಯಾಕ್ಟ್ ಮಾಡಿದ ಮತ್ತೋರ್ವರು ‘ಪ್ರಾಣಿ ಪ್ರಿಯರು’ ಎಂದು ತಿಳಿಸಿದ್ದಾರೆ. ಉಳಿದಂತೆ ಹೆಚ್ಚಿನ ಕಾಮೆಂಟ್ಗಳಲ್ಲಿ, ‘ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು’ ಎಂದು ತಿಳಿಸಲಾಗಿದೆ
ಇದನ್ನೂ ಓದಿ : ಗೆಳತಿ ಮಹಿಕಾ ಜೊತೆ ಗಾಳಿಪಟ ಹಾರಿಸಿದ ಹಾರ್ದಿಕ್ ಪಾಂಡ್ಯ | ವಿಡಿಯೋ ವೈರಲ್



















