ಬೆಂಗಳೂರು: ತುಂಬ ವರ್ಷಗಳಿಂದ ಬಯಕೆ ಹೊಂದಿರುವ ಸ್ವಂತದ್ದೊಂದು ಕಾರು ಖರೀದಿಸಬೇಕು. ಉಳಿತಾಯ, ಹೂಡಿಕೆ ಹಣವನ್ನು ಸುರಿದು ಅಪಾರ್ಟ್ ಮೆಂಟ್ ಖರೀದಿಸಿದ್ದೇನೆ, ಇಂಟೀರಿಯರ್ ಮಾಡಿಸಬೇಕು ಎನ್ನುವವರಿಗೆ 5 ಲಕ್ಷ ರೂಪಾಯಿ ಪರ್ಸನಲ್ ಲೋನ್ (Personal Loan) ಅವಶ್ಯಕತೆ ಇರುತ್ತದೆ. ಹೀಗೆ, ನೀವೂ 5 ಲಕ್ಷ ರೂಪಾಯಿ ಪರ್ಸನಲ್ ಲೋನ್ ತೆಗೆದುಕೊಳ್ಳಲು ಬಯಸಿದ್ದರೆ, ನೀವು ತಿಂಗಳಿಗೆ ಎಷ್ಟು ಇಎಂಐ ಕಟ್ಟಬೇಕು? ಇಲ್ಲಿದೆ ಮಾಹಿತಿ.
ಸಾಮಾನ್ಯವಾಗಿ ಬ್ಯಾಂಕುಗಳು 5 ಲಕ್ಷ ರೂಪಾಯಿ ಪರ್ಸನಲ್ ಲೋನ್ ಗೆ ಶೇ.12ರಷ್ಟು ವಾರ್ಷಿಕ ಬಡ್ಡಿದರ ವಿಧಿಸುತ್ತವೆ. ಸಾಲ ಪಡೆಯುವವರ ಸಿಬಿಲ್ ಸ್ಕೋರ್ 700-750ರವರೆಗೆ ಇದ್ದರೆ ಶೇ.12ರಷ್ಟು ಬಡ್ಡಿ ವಿಧಿಸುತ್ತವೆ. ಹಾಗೇನಾದರೂ ಸಿಬಿಲ್ ಸ್ಕೋರ್ 700ಕ್ಕಿಂತ ಕಡಿಮೆ ಇದ್ದರೆ ಹೆಚ್ಚಿನ ಬಡ್ಡಿ ವಿಧಿಸುತ್ತವೆ. ಇನ್ನೂ ಕೆಲವು ಬ್ಯಾಂಕುಗಳು ಸಾಲವನ್ನೇ ನೀಡುವುದಿಲ್ಲ. ಅಲ್ಲದೆ, ಸಾಲ ಪಡೆಯುವವರ ಮಾಸಿಕ ಸಂಬಳ ಕೂಡ ಪ್ರಮುಖವಾಗುತ್ತದೆ.
ಹಾಗೊಂದು ವೇಳೆ ನಿಮ್ಮ ಸ್ಕೋರ್ ಉತ್ತಮವಾಗಿದ್ದು, 5 ಲಕ್ಷ ರೂಪಾಯಿ ಪರ್ಸನಲ್ ಲೋನ್ ತೆಗೆದುಕೊಂಡರೆ, ನೀವು ಆಯ್ಕೆ ಮಾಡಿಕೊಳ್ಳುವ ಅವಧಿಯ ಮೇಲೆ ಇಎಂಐ ನಿರ್ಧಾರವಾಗುತ್ತದೆ. ಉದಾಹರಣೆಗೆ, ನೀವು 5 ವರ್ಷಗಳವರೆಗೆ ಇಎಂಐ ಪಾವತಿಯ ಆಯ್ಕೆ ಮಾಡಿಕೊಂಡರೆ, 5 ಲಕ್ಷ ರೂಪಾಯಿಗೆ ಶೇ.12ರ ಬಡ್ಡಿದರಂತೆ ನೀವು ಮಾಸಿಕ 11,122 ರೂಪಾಯಿ ಇಎಂಐ ಕಟ್ಟಬೇಕಾಗುತ್ತದೆ.
ಇದೇ ರೀತಿ, ನೀವು 4 ವರ್ಷಗಳ ಅವಧಿ ಆಯ್ಕೆ ಮಾಡಿಕೊಂಡರೆ, 13,167 ರೂಪಾಯಿ ಇಎಂಐ ಕಟ್ಟಬೇಕು. ಇನ್ನು, 3 ವರ್ಷಗಳ ಅವಧಿಗೆ 16,607 ರೂಪಾಯಿ, 2 ವರ್ಷಗಳ ಅವಧಿಗೆ 23,537 ರೂಪಾಯಿ ಹಾಗೂ 1 ವರ್ಷದಲ್ಲೇ ಸಾಲ ತೀರಿಸುತ್ತೇನೆ ಎಂದರೆ 44,424 ರೂಪಾಯಿ ಇಎಂಐ ಕಟ್ಟಬೇಕು. ಸಾಲ ತೀರಿಸುವ ಅವಧಿ ಕಡಿಮೆ ಇದ್ದಷ್ಟು ಬಡ್ಡಿ ಕಡಿಮೆಯಾಗುತ್ತದೆ. ಆದರೆ, ಸಂಬಳ, ಕಮಿಟ್ ಮೆಂಟ್ ನೋಡಿಕೊಂಡು ಸಾಲದ ಅವಧಿ ನಿರ್ಧರಿಸುವುದು ಒಳಿತು.
ಇದನ್ನೂ ಓದಿ: ನಿಮ್ಹಾನ್ಸ್ ಸಂಸ್ಥೆಯಲ್ಲಿ ಫೀಲ್ಡ್ ಆಫೀಸರ್ ಹುದ್ದೆಗಳ ನೇಮಕಾತಿ : ಸಂದರ್ಶನದ ದಿನಾಂಕ ಇಲ್ಲಿದೆ



















