ನೆಲಮಂಗಲ : ಕೊಡಲಿಯಿಂದ ಕೊಚ್ಚಿ ವೃದ್ಧ ಮಹಿಳೆಯನ್ನು ಕೊಂದಿದ್ದ ಆರೋಪಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಎಇರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮದಲ್ಲಿ ನಡೆದಿದೆ.
ದಾಕ್ಷಾಯಿಣಮ್ಮ(55) ಕೊಲೆಯಾದ ವೃದ್ದೆ. ವೀರಭದ್ರಯ್ಯ(60) ಆತ್ಮಹತ್ಯೆ ಮಾಡಿಕೊಂಡಿರುವ ಆರೋಪಿ. ಕಳೆದ ಶನಿವಾರದಂದು ಮಟಮಟ ಮಧ್ಯಾಹ್ನ ದಾಕ್ಷಾಯಿಣಮ್ಮನನ್ನು ಆರೋಪಿ ವೀರಭದ್ರ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರಿಂದ ಹುಡುಕಾಟ ನಡೆಸಲಾಗುತ್ತಿತ್ತು.
ನಿನ್ನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದ ಅಕ್ಕನ ಮನೆಗೆ ತಡರಾತ್ರಿ ಬಂದಿದ್ದ. ಅಕ್ಕನನ್ನ ಮಾತನಾಡಿಸಿಕೊಂಡು ತೋಟಕ್ಕೆ ಹೋದವನು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಹೊರಗಡೆ ಹೋದವನು ವಾಪಸ್ ಮನೆಗೆ ಬಾರದ ಕಾರಣ ಎಲ್ಲೆಡೆ ಹುಡುಕಾಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಘಟನೆ ಏನು?
ಕುದುರಗೆರೆ ಗ್ರಾಮದ ನಡುರಸ್ತೆಯಲ್ಲಿ ಹಾಡಹಗಲೇ ಕೊಡಲಿಯಿಂದ ಕೊಚ್ಚಿ ವೃದ್ಧ ಮಹಿಳೆಯನ್ನು ಬರ್ಬರವಾಗಿ ಆರೋಪಿ ಹತ್ಯೆ ಮಾಡಿದ್ದನು. ಕೊಲೆಯಾದ ದ್ರಾಕ್ಷಾಣಮ್ಮ ಅವರ ಪತಿ ನಾಗರಾಜು 8 ವರ್ಷದ ಹಿಂದೆ ಸಾವನ್ನಪ್ಪಿದ್ದರು. ಇಂದು ಮಧ್ಯಾಹ್ನ ಮೊಮ್ಮಗನನ್ನ ಶಾಲೆಯಿಂದ ಮನೆಗೆ ಕರೆದುಕೊಂಡು ಬರುವಾಗ ಮೊಮ್ಮಗನ ಎದುರೆ ಕೊಚ್ಚಿಕೊಂದಿದ್ದಾನೆ. ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ : ನಗರಸಭೆ ಪೌರಾಯುಕ್ತೆಗೆ ಪ್ರಾಣ ಬೆದರಿಕೆ | ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ದ ಭುಗಿಲೆದ್ದ ಆಕ್ರೋಶ.. ಬಂಧನಕ್ಕೆ ಆಗ್ರಹ!



















