ತುಮಕೂರು : ತಾಯಿಗೆ ಹಲ್ಲೆ ಮಾಡಿದನೆಂದು ಸಾಕು ತಂದೆಯನ್ನ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ, ಶಿರಾ ತಾಲೂಕಿನ ಮಾರನಗೆರೆ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.
ತುಳಸಿರಾಮ್ (40) ಹತ್ಯೆಯಾದ ಸಾಕು ತಂದೆ. ಪುತ್ರ ಹರೀಶ್ ರಾಮನಾಯಕ್(18) ನಿಂದ ಕೃತ್ಯ. ತುಳಸಿರಾಮ್ ಹರೀಶ್ ತಾಯಿಯನ್ನು ಎರಡನೇ ಮದುವೆಯಾಗಿದ್ದನು. ನಿನ್ನೆ ರಾತ್ರಿ ಹರೀಶ್ ತಾಯಿ ಮೇಲೆ ಸಾಕು ತಂದೆ ಹಲ್ಲೆ ಮಾಡಿದ್ದ, ಹಾಗಾಗಿ ಮಗ ಹರೀಶ್ ಮಾರಕಾಸ್ತ್ರದಿಂದ ಕೊಲೆ ಮಾಡಿರುವುದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಆರೋಪಿಯು ಕೊಲೆ ಮಾಡಿದ ಬಳಿಕ ಪೊಲೀಸರು ಬರುವ ವರೆಗೂ ಮೃತ ದೇಹದ ಪಕ್ಕದಲ್ಲೇ ಕುಳಿತಿದ್ದನು. ಸದ್ಯ ತಾವರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕಾರು-ಕೆಎಸ್‌ಆರ್‌ಟಿಸಿ ಬಸ್ ನಡುವೆ ಡಿಕ್ಕಿ | ಮೂವರು ಸಾವು



















