ಬೆಂಗಳೂರು: ನಾನ್ ಕನ್ನಡಿಗ ಹೆಚ್‌ಆರ್ (HR) ಕೆಲಸಕ್ಕೆ ಬೇಕು ಎಂಬ ಬೆಂಗಳೂರಿನ ಖಾಸಗಿ ಕಂಪನಿಯೊಂದರ ಪ್ರಕಟಣೆಗೆ, ಕನ್ನಡಿಗರನ್ನು ಕೆರಳಿಸಿದೆ.
ಜೆಪಿ ನಗರದಲ್ಲಿರುವ ಸ್ಕಿಲ್ ಸೋನಿಕ್ಸ್ ಎಂಬ ಕಂಪನಿ, ಹೆಚ್‌ಆರ್ ಹುದ್ದೆಗೆ ನೌಕ್ರಿ ಡಾಟ್ ಕಾಂನಲ್ಲಿ ಪ್ರಕಟಣೆ ಹೊರಡಿಸಿದೆ. ಕನ್ನಡಿಗರನ್ನ ಹೊರತು ಪಡಿಸಿ ಎಂದು ಪ್ರಕಟಣೆಯಲ್ಲಿ ನಮೂದಿಸಲಾಗಿದೆ. ಇದರಿಂದ ಸಿಡಿದೆದ್ದ ಕನ್ನಡಿಗರು ಕಂಪನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕನ್ನಡದ ನೆಲದಲ್ಲಿ ಕನ್ನಡಿಗರನ್ನು ಉದ್ಯೋಗಕ್ಕೆ ಬೇಡ ಅಂತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ಇನ್ನು ಈ ಕಂಪನಿಯ ಪ್ರಕಟಣೆ ಎಕ್ಸ್‌ನಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಪ್ರಸಾರ ಭಾರತಿಯಲ್ಲಿ 14 ಹುದ್ದೆ | 50 ಸಾವಿರ ರೂಪಾಯಿ ಸ್ಯಾಲರಿ


















