ಬೆಂಗಳೂರು: ಬೀದಿ ನಾಯಿಗಳಿಗೆ ಭರ್ಜರಿ ಬಾಡೂಟ ಹಾಕಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಂದು ಭಾಗ್ಯ ನೀಡಲು ಮುಂದಾಗಿದೆ.ಈ ಹಿಂದೆ ಒಂದು ಬಾರಿ ನಾಯಿಗಳಿಗೆ ಬಿರಿಯಾನಿ ಊಟ ನೀಡೋದಕ್ಕೆ ಮುಂದಾಗಿದ ಜಿಬಿಎ ಅಧಿಕಾರಿಗಳು ಈ ಬಾರಿ ಬೀದಿನಾಯಿಗಳಿಗೆ ಪ್ರತಿನಿತ್ಯ ಎರಡು ಬಾರಿ ಚಿಕನ್ ಭಾಗ್ಯ ಕರುಣಿಸಲು ಮನಸು ಮಾಡಿದೆ. ಆದರೆ 5 ನಗರಪಾಲಿಕೆಯ ವ್ಯಾಪ್ತಿಯಲ್ಲಿ4428 ಬೀದಿ ನಾಯಿಗಳ ವಾರ್ಷಿಕ ನಿರ್ವಹಣೆಗೆ ಬರೋಬ್ಬರಿ 18 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಸುಪ್ರೀಂ ಕೋರ್ಟ್ ಬೀದಿ ನಾಯಿಗಳಿಗೆ ಶೆಲ್ಟರ್ ನಿರ್ಮಾಣ ಮಾಡಿ ನಾಯಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡಿ ಎಂದು ಎಲ್ಲಾ ರಾಜ್ಯಗಳಿಗೂ ಸೂಚಿಸಿತ್ತು. ಹಾಗೂ ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆಗಳು, ಅಸ್ಪ, ಸ್ಟೇಡಿಯಂ ಸೇರಿದಂತೆ ಜನನಿಬಿಡ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡಿ ಅಂತ ಅದೇಶ ನೀಡಲಾಗಿತ್ತು. ಸುಪ್ರೀಂ ಕೋರ್ಟ್ ಅದೇಶದ ಅನ್ವಯ ಬೀದಿ ನಾಯಿಗಳಿಗೆ ಶೆಲ್ಟರ್ ನಿರ್ಮಾಣ ಮಾಡಿ. ನಿತ್ಯ ಎರಡು ಬಾರಿ ಚಿಕನ್ ರೈಸ್ ನೀಡೋದಕ್ಕೆ ಜಿಬಿಎ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ 7,873 ವಿವಿಧ ಸಂಸ್ಥೆಗಳ ಪೈಕಿ 2,816 ಸಂಸ್ಥೆಗಳು ತಮ್ಮ ಆವರಣದಲ್ಲಿ 4,428 ಬೀದಿ ನಾಯಿ ಇವೆ ಎಂಬ ಮಾಹಿತಿ ನೀಡಿವೆ. ಈ ಪೈಕಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 2,339, ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 1,223 , ಪಶ್ಚಿಮ ನಗರ ಪಾಲಿಕೆಯಲ್ಲಿ 525, ಪೂರ್ವ ನಗರ ಪಾಲಿಕೆಯಲ್ಲಿ 274 ಹಾಗೂ ದಕ್ಷಿಣ ನಗರ ಪಾಲಿಕೆಯಲ್ಲಿ ಕೇವಲ 131 ಬೀದಿ ನಾಯಿ ಇವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಅಂಕಿ ಅಂಶವನ್ನು ರಾಜ್ಯ ಸರ್ಕಾರದ ಮೂಲಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶಾಲ-ಕಾಲೇಜು, ಅಸ್ಪತ್ರೆ, ಕ್ರೀಡಾಂಗಣದ ಅವರಣದಲ್ಲಿ 4429 ಬೀದಿ ನಾಯಿಗಳನ್ನು ಪಾಲಿಕೆ ಗುರುತು ಮಾಡಿದೆ. ಅವುಗಳಿಗೆ ಆಶ್ರಯ. ನಿತ್ಯ ಎರಡು ಬಾರಿ ಚಿಕನ್ ರೈಸ್, ಲಸಿಕೆ ನಿರ್ವಹಣೆಗೆ ಬರೋಬ್ಬರಿ 18 ಕೋಟಿ ರೂ. ವೆಚ್ಚವಾಗಲಿದ್ದು, 5 ನಗರಪಾಲಿಕೆ ವ್ಯಾಪ್ತಿಯಲ್ಲಿ 19 ಕಡೆ ಶೆಲ್ಟರ್ ನಿರ್ಮಾಣ ಮಾಡುವುದಾಗಿ ಚಿಂತನೆ ನಡೆಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಒಟ್ಟು 2.79 ಲಕ್ಷ ಬೀದಿ ನಾಯಿಗಳಿವೆ. ಸಂತಾನ ಹರಣ ಶಸ್ತ್ರ ಚಿಕಿತ್ಸೆ ವ್ಯವಸ್ಥೆ, ಮೈಕ್ರೋ ಚಿಪ್ ಅಳವಡಿಕೆ, ಆಶ್ರಯ ತಾಣ, ನಿಗಾ ಕೇಂದ್ರದ ಸ್ಥಾಪನೆಗೆ 125.10 ಕೋಟಿ ರು, ಆ್ಯಂಟಿ ರೇಬಿಸ್ ಸೇರಿದಂತೆ ಔಷಧ ವೆಚ್ಚಕ್ಕೆ 17.14 ಕೋಟಿ ರು. ಸಿಬ್ಬಂದಿ ವೆಚ್ಚಕ್ಕೆ 37.14 ಕೋಟಿ ರು, ಸಾಗಾಣಿಕೆ, ಚಿಕನ್ ರೈಸ್ ಸೇರಿದಂತೆ ಆಹಾರ ನೀಡುವುದಕ್ಕೆ 3.90 ಕೋಟಿ ರು. ಸೇರಿದಂತೆ ಒಟ್ಟು 183,57,13,475 ರು. ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.
ನಗರ ಪಾಲಿಕೆವಾರು ಎಷ್ಟು ಬೀದಿ ನಾಯಿ ಗುರುತು, ಎಷ್ಟು ಶೆಲ್ಟರ್?
ಬೆಂ. ದಕ್ಷಿಣ 131 – 2
ಬೆಂ.ಪಶ್ಚಿಮ 525 – 5
ಬೆಂ.ಕೇಂದ್ರ 1223 – 7
ಬೆಂ.ಪೂರ್ವ 274 – 2
ಬೆಂ.ಉತ್ತರ 2339 – 3
ಒಟ್ಟು 4428 – 19
ಇದನ್ನೂ ಓದಿ; ಮನ್ರೇಗಾ ವಾರ್ | ಹೆಚ್‌ಡಿಕೆ ಪಂಥಾಹ್ವಾನ ಸ್ವೀಕರಿಸಲು ಸಿದ್ಧ ಎಂದ ಡಿಕೆಶಿ!



















