ಬೆಂಗಳೂರು: ಮನ್ರೇಗಾ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಆಹ್ವಾನಿಸಿದ್ದಾರೆ. ಪಂಥಾಹ್ವಾನ ಸ್ವೀಕರಿಸಲು ನಾನು ಸಿದ್ಧ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ, ಕುಮಾರಸ್ವಾಮಿ ಪಂಥಾಹ್ವಾನ ಸ್ವೀಕರಿಸಿದ್ದೇನೆ. ನಾನು ಯಾವಾಗ ಬೇಕಾದರು ರೆಡಿ ಇದ್ದೀನಿ. ಈ ಮೂರು ದಿನಗಳಲ್ಲಿ ಯಾವಾಗಾದರು ಸಿದ್ಧ. ಇವತ್ತು ಸಂಜೆನೇ ರೆಡಿ. ಸಾರ್ವಜನಿಕ ಚರ್ಚೆಗಾದರು ಬರಲಿ, ಇಲ್ಲವೇ ಯಾವುದಾದರೂ ಟಿವಿ ಮಾಧ್ಯಮಕ್ಕಾದರು ಬರಲಿ. ವಿಧಾನಸಭೆಯಲ್ಲಾದರು ಚರ್ಚೆಗೆ ಬರಲಿ. ಅವರು ಯಾವಾಗ ಹೇಳುತ್ತಾರೋ ಹೇಳಿ, ನಾನು ಡಿಬೆಟ್ಗೆ ರೆಡಿ. ಅವರ ಪಂಥಾಹ್ವಾನ ಸ್ವೀಕಾರ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಬಿಡಿ ಅವರ ಮಾತನ್ನೆಲ್ಲ ನಾನು ಸಿರಿಯಸ್ ಆಗಿ ತೆಗೆದುಕೊಳ್ಳಲ್ಲ. ನೋಡಿದ್ದೀರಾ ಅಲ್ವ? ಬರೀ ಡೈಲಾಗ್ ಹೇಳೋದು ಸ್ಟೇಟ್ಮೆಂಟ್ ಕೊಡೋದು. ಅದು ಆಯಿತು ಬಿಡಿ ಡಿಬೇಟ್ಗೆ ಯಾವಾಗ ಟೈಂ ಫಿಕ್ಸ್ ಮಾಡ್ತೀರಾ. ನಾನು ನೋಡಪ್ಪ ಯಾವಾಗ ಬೇಕಿದ್ರು ರೆಡಿ. ನನಗೆ 3 ದಿನ ಟೈಂ ಕೊಡಿ ಅಷ್ಟೆ. ಇವತ್ತು ಸಂಜೆಯೇ ಬೇಕಿದ್ರೆ ಕರೀರಿ, ನಾನು ರೆಡಿ. ನನಗೆ ಯಾವ ತಯಾರಿ ಬೇಡ, ಅವಶ್ಯಕತೆ ಇಲ್ಲ ಎಂದು ಸವಾಲೆಸೆದಿದ್ದಾರೆ.
ನರೇಗಾ ಏನು ಎಂದು ನನ್ನ fingertips ನಲ್ಲಿ ಇದೆ. ಇಡೀ ದೇಶದಲ್ಲಿ ನರೇಗಾ ಯೋಜನೆಯಡಿ ನಮ್ಮ ತಾಲೂಕಿಗೆ ನಂಬರ್ ಒನ್ ತಾಲೂಕು ಕನಕಪುರ ಎಂದು ಪ್ರಶಸ್ತಿ ಸಿಕ್ಕಿದೆ. ಇದು ಪ್ರಹ್ಲಾದ್ ಜೋಷಿ, ಕುಮಾರಸ್ವಾಮಿ, ವಿಜಯೇಂದ್ರಗೆ ಗೊತ್ತಿದೆಯೋ ಇಲ್ವೋ ಗೊತ್ತಿಲ್ಲ. ದುಡ್ಡು ಹೊಡೆದಿದ್ದೇವೆ ಎಂದು ಕೇಂದ್ರ ಸರ್ಕಾರ ಬಂದು ತನಿಖೆ ಮಾಡಿದರು, ಇದೆಲ್ಲದರ ಬಗ್ಗೆ ನಾನು ಡಿಬೆಟ್ ಮಾಡುವುದಕ್ಕೆ ಸಿದ್ಧನಾಗಿದ್ದೇನೆ ಎಂದಿದ್ದಾರೆ.
ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ ಆಗಮನ ಎಂಬ ಚರ್ಚೆ ಆಗಲಿ. ಅಯ್ಯೋ ರಾಜ್ಯ ಅಲ್ಲ ಹಳ್ಳಿಯಿಂದ ರಾಜಕಾರಣ ಶುರು ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ; ಸ್ವಾತಂತ್ರ್ಯ ಕೊಡಿಸಿದ ಗಾಂಧೀಜಿಗೆ ನೀವು ದ್ರೋಹ ಮಾಡುತ್ತಿದ್ದೀರಲ್ಲ | ಈಶ್ವರ್ ಖಂಡ್ರೆ



















