ಬೀದರ್ : ಸ್ವಾತಂತ್ರ್ಯ ಕೊಡಿಸಿದ ಗಾಂಧೀಜಿಗೆ ನೀವು ದ್ರೋಹ ಮಾಡುತ್ತಿದ್ದೀರಲ್ಲ. ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ಈಶ್ವರ್ ಖಂಡ್ರೆ ಆಕ್ರೋಶಿಸಿದ್ದಾರೆ.
ಬೀದರ್‌ನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಈಶ್ವರ್ ಖಂಡ್ರೆ ಸತ್ಯ, ಶಾಂತಿ, ಅಹಿಂಸೆ ಮಂತ್ರದ ಮೂಲಕ ಸ್ವಾತಂತ್ರ್ಯ ನೀಡಿದವರ ಹೆಸರು ಅಳಿಸಲು ಹೊರಟಿದ್ದೀರಿ. ಗಾಂಧೀಜಿಯನ್ನ ಕೊಲೆಗೈದ ಗೋಡ್ಸೆ ಹೆಸರಿಟ್ಟು ಬಿಡಿ ರಾಮ ರಾಜ್ಯ ಮಾಡಲು ಹೋರಟಿದ್ದೇವೆ ಎಂದು ಹೇಳುವ ನಿಮಗೆ ನೈತಿಕತೆ ಇಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಮಾತಿಗೆ ಯಾವುದೇ ಬೆಲೆ ಇಲ್ಲ, ಇತಿಹಾಸ ಅಳಸಿ ಹಾಕುವ ಕೆಲಸ ಮಾಡುತ್ತಿದ್ದಾರೆ. ನರೇಗಾದಲ್ಲಿ ಭ್ರಷ್ಟಾಚಾರ ಇದ್ರೆ ಅದಕ್ಕೆಲ್ಲಾ ಅವರೇ ಕಾರಣ ಬಿಜೆಪಿ ಸರ್ವಾಧಿಕಾರಿ, ಹಿಟ್ಲರ್ ಶಾಯಿ ದೋರಣೆ ಇದೆ ಎಂದಿದ್ದಾರೆ.
ಬಳ್ಳಾರಿ ಬ್ಯಾನರ್ ಗಲಾಟೆ ವಿಚಾರ
ಎಲ್ಲಾ ಬಿಜೆಪಿಯ ಪ್ರಚೋದನೆಯಿಂದಾಗಿ ಘಟನೆಯಾಗಿದೆ. ಈ ಘಟನೆಗೆ ಬಿಜೆಪಿಯೇ ಕಾರಣಿಕರ್ತ, ಅವರಿಗೆ ಈ ವಿಚಾರದಲ್ಲಿ ಯಾವುದೇ ಜನ ಬೆಂಬಲ ಸಿಗುತ್ತಿಲ್ಲ. ಇಂಥಾ ಷಡ್ಯಂತ್ರ ಮಾಡಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಈ ರೀತಿ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ ಹೇಳಿದ್ದಾರೆ.
ಇದನ್ನೂ ಓದಿ : ಬೇಡ್ತಿ-ವರದಾ ನದಿ ಹಿಂದಿನ ಯೋಜನೆಗೂ ಪ್ರಸ್ತುತ ಯೋಜನೆಗೂ ವ್ಯತ್ಯಾಸವಿದೆ | ಬೊಮ್ಮಾಯಿ



















