ಹುಬ್ಬಳ್ಳಿ : ಮಳ್ಳನಂತೆ ಬಂದು ಚಾಲಾಕಿ ಕಳ್ಳ ಲ್ಯಾಪ್‌ಟಾಪ್ ಮತ್ತು ಐಪೋನ್ ಎಗರಿಸಿರುವ ಘಟನೆ ಹುಬ್ಬಳ್ಳಿಯ ಬನಶಂಕರಿ ಬಡಾವಣೆಯಲ್ಲಿ ನಡೆದಿದೆ.
ನಿತಿನ ಎಂಬಾತನಿಗೆ ಸೇರಿದ ಲ್ಯಾಪ್‌ಟಾಪ್ ಮತ್ತು ಐಪೋನ್ ಕಳ್ಳತನವಾಗಿದೆ. ನಿತಿನ ಮತ್ತು ಆತನ ಸ್ನೇಹಿತ ಇಬ್ಬರು ಒಂದೇ ರೂಮ್‌ಲ್ಲಿ ಬಾಡಿಗೆಗಿದ್ದರು. ಗೆಳೆಯನೊಡನೆ ಹೊರಗೆ ಹೋದಾಗ ಮಳ್ಳನಂತೆ ಬಂದ ಕಳ್ಳ ತನ್ನಮನೆಯಂತೆ ಒಳಗೆ ಬಂದು ಕಳ್ಳತನವೆಸಗಿದ್ದಾನೆ.
ಸುಮಾರು 1,80,000 ಮೌಲ್ಯದ ಐಫೋನ್ ಮೊಬೈಲ್ ಹಾಗೂ ಸುಮಾರು 50 ಸಾವಿರ ಮೌಲ್ಯದ ಲ್ಯಾಪ್‌ಟಾಪ್ ಕಳುವಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ಕೌಟುಂಬಿಕ ಕಲಹ | ಕಾರಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ BJP ಮುಖಂಡ



















