ಬೆಂಗಳೂರು : ಬಟ್ಟೆ ವಿಚಾರಕ್ಕೆ ಯುವತಿಗೆ ಬುದ್ಧಿ ಹೇಳಿದ ಹೋಮ್‌ಗಾರ್ಡ್‌ಗೆ ಜುಟ್ಟು ಹಿಡಿದು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೆಆರ್ ಪುರಂ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.
ಲಕ್ಷ್ಮಿ ನರಸಮ್ಮ ಹಲ್ಲೆಗೊಳಗಾದ ಮಹಿಳೆ. ಮೋಹಿನಿ ಹಲ್ಲೆಗೈದ ಯುವತಿ. ಮೋಹಿನಿಯು ಶಾರ್ಟ್ ಬಟ್ಟೆ ಹಾಕಿ ಬೀದಿಗೆ ಬಂದು ಸುತ್ತಾಡ್ತಿದ್ದಳು. ಅಲ್ಲದೇ ಅಲ್ಲಿದ್ದ ಯುವಕರು ಈಕೆಗೆ ಚುಡಾಯಿಸುತ್ತಿದ್ದರು. ಇದನ್ನು ಕಂಡ ಹೋಂ ಗಾರ್ಡ್ ಬುದ್ದಿವಾದ ಹೇಳಿದ್ದಕ್ಕೆ ಮೈಯೆಲ್ಲಾ ಕೆಂಪಗಾಗಿಸಿಕೊಂಡ ಯುವತಿ ಡ್ಯೂಟಿಯಲ್ಲಿದ್ದ ಮಹಿಳೆಗೆ ಥಳಿಸಿದ್ದಾಳೆ.
ಸದ್ಯ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಮೋಹಿನಿಯನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ : ಬಾಗಲಕೋಟೆಯಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ | ಇಬ್ಬರು ಮಕ್ಕಳು ಸಾವು!



















