ಚಿತ್ರದುರ್ಗ: ಪ್ರವಾಸ ಮುಗಿಸಿ ಮರಳುತ್ತಿದ್ದ ವೇಳೆ ಕೊಲ್ಲಾಪುರ ಡಿವೈಎಸ್‌ಪಿ ವೈಷ್ಣವಿ ಹಾಗೂ ಕುಟಂಬಸ್ಥರು ಇದ್ದ ಕಾರು, ಲಾರಿಗೆ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗದ ತಮಟಕಲ್ಲು ಗ್ರಾಮದ ಬ್ರಿಡ್ಜ್ ಬಳಿ ಸಂಭವಿಸಿದೆ.
ಕೊಲ್ಲಾಪುರ ಡಿವೈಎಸ್‌ಪಿ ವೈಷ್ಣವಿ ತಾಯಿ (65) ಕಮಲ ಹರಿಬಾಬು ಹಾಗೂ ಕಾರು ಚಾಲಕ (40) ರಾಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತ ಗಂಭೀರವಾಗಿ ಗಾಯಗೊಂಡಿರುವ ಪೊಲೀಸ್ ಅಧಿಕಾರಿ ವೈಷ್ಣವಿ ಸೇರಿ ಮೂವರನ್ನು ಚಿತ್ರದುರ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು, ವೈಷ್ಣವಿ ಕುಟುಂಬಸ್ಥರು ಚಿತ್ರದುರ್ಗಕ್ಕೆ ದಾವಿಸಿದ್ದಾರೆ.
ತಮಿಳುನಾಡು ಪ್ರವಾಸ ಮುಗಿಸಿ ಕೊಲ್ಲಾಪರಕ್ಕೆ ವಾಪಾಸ್ ಆಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಕೊಲ್ಲಾಪುರಕ್ಕೆ ತೆರಳುವ ವೇಳೆ ತಮಟಕಲ್ಲು ಬಳಿ ಅಪಘಾತ ನಡೆದಿ ದ್ದು, ವೇಗವಾಗಿ ಬುರುತ್ತಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಅಪಘಾತದ ತೀವ್ರತೆ ಹೆಚ್ಚಾಗಿದೆ. ಈ ಭೀಕರ ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಜ್ಜು ಗುಜ್ಜಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬಟ್ಟೆ ವಿಚಾರಕ್ಕೆ ಬುದ್ಧಿ ಹೇಳಿದ ಹೋಮ್‌ಗಾರ್ಡ್‌ಗೆ ಜುಟ್ಟು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಯುವತಿ



















