ನವಿ ಮುಂಬೈ : ಕೊನೆಯ ಎಸೆತದವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ 2026ರ ಮಹಿಳಾ ಪ್ರೀಮಿಯರ್ ಲೀಗ್ (WPL) ಟೂರ್ನಿಯ ಎರಡನೇ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ತಂಡ, ಯುಪಿ ವಾರಿಯರ್ಸ್ ತಂಡವನ್ನು 10 ರನ್‌ಗಳಿಂದ ಸೋಲಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ತನ್ನ ಪಾಲಿನ 20 ಓವರ್‌ಗಳಿಗೆ ನಾಲ್ಕು ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು. ನಾಯಕಿ ಆಶ್ಲೀ ಗಾರ್ಡ್ನರ್ 65 ರನ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ 27 ರನ್‌ಗಳ ಸಹಾಯದಿಂದ ಜಯಂಟ್ಸ್ ಈ ಅದ್ಭುತ ಮೊತ್ತವನ್ನು ದಾಖಲಿಸಿತು.
ಗುರಿಯನ್ನು ಹಿಂಬಾಲಿಸಿದ ಯುಪಿ ವಾರಿಯರ್ಸ್ ತಂಡ, ಫೋಬ್ ಲಿಚ್‌ಫೀಲ್ಡ್ ಅವರ ಸ್ಪೋಟಕ 78 ರನ್‌ಗಳ ಹೊರತಾಗಿಯೂ, ಕೊನೆಯ ಗಳಿಗೆಯಲ್ಲಿ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.
ಇದನ್ನೂ ಓದಿ : ಪಾಕಿಸ್ತಾನದ ಜೊತೆ ರಾಜಿ, ಸಂಧಾನ, ಶಾಂತಿ ಅಸಾಧ್ಯ – ವಿಕ್ರಮ್ ಸೂದ್



















