ಹಾವೇರಿ : ಆಸ್ತಿ ವ್ಯಾಜ್ಯ ಹಿನ್ನೆಲೆ ಕೆಸರು ಗದ್ದೆಯಲ್ಲೇ 2 ಕುಟುಂಬಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ನದಿಹರಹಳ್ಳಿಯಲ್ಲಿ ನಡೆದಿದೆ.
8 ಎಕರೆ ಗದ್ದೆ ಸಲುವಾಗಿ ಕೋಟೆಗೌಡ ಮತ್ತು ಚನ್ನಗೌಡ ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಎರಡೂ ಕುಟುಂಬದ ಸದಸ್ಯರಿಗೆ ಗಂಭೀರ ಗಾಯಗಳಾಗಿವೆ.
ಹಲ್ಲೆಗೊಳಗಾದವರನ್ನು ತಾಲೂಕು ಮತ್ತು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಕುಮಾರಪಟ್ಟಣಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಬೆಂಗಳೂರು | ಕಾಲೇಜು ಆಡಳಿತ ಮಂಡಳಿಯಿಂದ ಕಿರುಕುಳ ಆರೋಪ.. ಮನನೊಂದು ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ!



















