ಕೋಲಾರ : ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ ಜೊತೆಗಿದ್ದಾರೆ. ರಾಜ್ಯದಲ್ಲಿ ಸಿಎಂ ಆಗಿ ಸಿದ್ದರಾಮಯ್ಯ 2028ರ ವರೆಗೂ ಇರ್ತಾರೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಕೋಲಾರದಲ್ಲಿ ಮಸೀದಿ ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾಧ್ಯಮಗಾರರೊಂದಿಗೆ ಮಾತನಾಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ನವೆಂಬರ್ ಕ್ರಾಂತಿ ಆಗಿಲ್ಲ, ಡಿಸೆಂಬರ್ ಕ್ರಾಂತಿಯೂ ಆಗಿಲ್ಲ. ಕ್ರಾಂತಿ ಎಂದು ಯಾರು ಹೇಳಿದ್ರೊ ಅವರಿಗೆ ವಾಂತಿ ಭೇಧಿ ಆಗ್ತದೆ ಎಂದು ನವೆಂಬರ್‌ನಲ್ಲೆ ನಾನು ಹೇಳಿದ್ದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ ಜೊತೆಗಿದ್ದಾರೆ ಎಂದಿದ್ದಾರೆ.
ಸಿಎಂ ಬದಲಾವಣೆ ಎಲ್ಲವೂ ಹೈಕಮಾಂಡ್‌ಗೆ ಬಿಟ್ಟ ವಿಚಾರ ಆದರೆ ರಾಜ್ಯದಲ್ಲಿ ಸಿಎಂ ಆಗಿ ಸಿದ್ದರಾಮಯ್ಯ 2028ರ ವರೆಗೂ ಇರ್ತಾರೆ. ಸಿದ್ದರಾಮಯ್ಯ ನಂತರ, ಸಿಎಂ ಆಗೋದು ಡಿಕೆ ಶಿವಕುಮಾರ್. ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ನಾನು ಬಯಸುವೆ. ಡಿಕೆ ಶಿವಕುಮಾರ್ ರಕ್ತದಲ್ಲೇ ಕಾಂಗ್ರೆಸ್ ಇದೆ. ರಕ್ತ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕೋಗಿಲು ಲೇಔಟ್ ಡೆಮಾಲಿಷನ್ ಕೇಸ್ | 25 ಕುಟುಂಬಕ್ಕೆ ‘ಗೃಹ ಭಾಗ್ಯ’ ನೀಡುವ ಕಾರ್ಯಕ್ರಮ ದಿಢೀರ್ ರದ್ದು



















