ಕಾರವಾರ : ದಾಖಲೆ ಮುರಿಯಬಹುದು ಅದು ಸತ್ಯ. ಆದ್ರೆ ಯಾರು ಕೂಡಾ ದೇವರಾಜ ಅರಸು ಆಗಲು ಸಾಧ್ಯವಿಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಾರವಾರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ದೇವರಾಜು ಅರಸು ರವರ ಆಡಳಿತ ಅದ್ಭುತವಾದದ್ದು, ಬಡವರ ಪಾಲಿನ ಆಡಳಿತವಾಗಿತ್ತು. ದೇವರಾಜು ಅರಸು ತಂದಿದ್ದ ಭೂ ಸುಧಾರಣೆ ಕಾಯಿದೆ, ಮಲಹೋರುವ ಪದ್ದತಿ ನಿಷಿದ್ಧ ಸೇರಿ ಹಲವಾರು ಯೋಜನೆಗಳು ಇನ್ನು ಕೂಡಾ ಅಜರಾಮರ. ಆದ್ರೆ ಸಿದ್ದರಾಮಯ್ಯನವರ ಆಡಳಿತ ಪರಿಸ್ಥಿತಿ ಜನರಿಗೆ ಗೊತ್ತಿದೆ ಎಂದಿದ್ದಾರೆ.
ಇದನ್ನೂ ಓದಿ : ಹೆಣ್ಣು ಮಗಳು ಯಾವ ಪಕ್ಷಕ್ಕಾದ್ರೂ ಸೇರಿರಲಿ ವಿವಸ್ತ್ರಗೊಳಿಸಬಾರದು | ಸಿ.ಟಿ ರವಿ



















