ಬೆಂಗಳೂರು: ದೇಶದ ಪ್ರಮುಖ ಆಟೋಮೊಬೈಲ್ ಕಂಪನಿಗಳಲ್ಲಿ ಒಂದಾಗಿರುವ ಮಹೀಂದ್ರಾ ಕಂಪನಿ ಈಗ 2025-26ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಘೋಷಣೆ ಮಾಡಿದೆ. ಮಹೀಂದ್ರಾ ಬಿಗ್ ಬಾಸ್ ನಯಿ ಪೆಹಚಾನ್ ಎಂಬ ಸ್ಕಾಲರ್ ಶಿಪ್ ಯೋಜನೆಯನ್ನು ಘೋಷಣೆ ಮಾಡಲಾಗಿದ್ದು, ದೇಶದ ಯಾವುದೇ ಶಾಲೆ-ಕಾಲೇಜುಗಳಲ್ಲಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ಅರ್ಜಿಗಳನ್ನು (Mahindra Big Boss Nayi Pehchan Scholarship 2025-26) ಸಲ್ಲಿಸಲು ಜನವರಿ 15 ಕೊನೆಯ ದಿನವಾಗಿದೆ.
ಫ್ರೀಲಾನ್ಸ್ ಟ್ರ್ಯಾಕ್ಟರ್ ಮೆಕ್ಯಾನಿಕ್ ಗಳ ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರು ಭಾರತೀಯ ನಾಗರಿಕರಾಗಿರಬೇಕು. 7ರಿಂದ 21 ವರ್ಷದೊಳಗಿನವರಾಗಿರಬೇಕು. ಕಳೆದ ಪರೀಕ್ಷೆಯಲ್ಲಿ ಶೇ.50ರಷ್ಟು ಅಂಕಗಳನ್ನು ಪಡೆದಿರಬೇಕು. ಮಹೀಂದ್ರಾ ಉದ್ಯೋಗಿಗಳು ಯೋಜನೆಯ ಲಾಭ ಪಡೆಯಲು ಆಗುವುದಿಲ್ಲ ಎಂದು ತಿಳಿಸಲಾಗಿದೆ. ಸ್ಕಾಲರ್ ಶಿಪ್ ಗೆ ಆಯ್ಕೆಯಾದವರಿಗೆ 6 ಸಾವಿರ ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಅಗತ್ಯ ದಾಖಲೆಗಳು
- ಪಾಸ್ ಪೋರ್ಟ್ ಗಾತ್ರದ ಫೋಟೋ
- ಗುರುತಿನ ಚೀಟಿ
- ಆದಾಯ ಪ್ರಮಾಣಪತ್ರ
- ಕಾಲೇಜು ಪ್ರವೇಶಾತಿಗೆ ಸಂಬಂಧಿಸಿದ ದಾಖಲೆ
- ಬ್ಯಾಂಕ್ ಪಾಸ್ ಬುಕ್
- ಅಂಕಪಟ್ಟಿ, ಜಾತಿ ಪ್ರಮಾಣಪತ್ರ
- ಪೋಷಕರು ಮೆಕ್ಯಾನಿಕ್ ಎಂಬುದಕ್ಕೆ ದಾಖಲೆ
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ https://www.buddy4study.com/ ವೆಬ್ ಸೈಟ್ ಗೆ ಭೇಟಿ ನೀಡಬೇಕು
- ಇದಾದ ಬಳಿಕ ಅಗತ್ಯ ಮಾಹಿತಿ ಒದಗಿಸಿ ಲಾಗಿನ್ ಆಗಬೇಕು
- ಮಹೀಂದ್ರಾ ಬಿಗ್ ಬಾಸ್ ನಯಿ ಪೆಹಚಾನ್ 2025–26 ಮೇಲೆ ಕ್ಲಿಕ್ ಮಾಡಬೇಕು
- ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು
ಇದನ್ನೂ ಓದಿ : ಆಧಾರ್ ಕಾರ್ಡ್ ಬಳಸುವವರಿಗೆ ಕಹಿ ಸುದ್ದಿ : 25 ರೂಪಾಯಿ ಏರಿಕೆಯಾಗಿದೆ ಈ ಶುಲ್ಕ



















