ಬೀದರ್ : ಎಷ್ಟು ದಿನ ಇರ್ತಿನೋ ಗೊತ್ತಿಲ್ಲ ಎಂದು ಹೇಳಿ ಸಿದ್ದರಾಮಯ್ಯ ಜನಕ್ಕೆ ನಿರಾಸೆ ಮಾಡಿದ್ರು.ಇಲ್ಲ ಡಿಕೆ ಶಿವಕುಮಾರ್‌ಗೆ ಹೆದರಿದ್ರಾ? ಮಾತಿನಂತೆ ನಡೆಯಬೇಕೆಂಬ ಮಾತು ನೆನಪಾಯ್ತಾ? ಎಂದು ಎನ್ ರವಿಕುಮಾರ್ ಪ್ರಶ್ನಿಸಿದ್ದಾರೆ.
ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಬಗ್ಗೆ ಮಾತನಾಡಿ, ಸಿದ್ರಾಮಯ್ಯ ಇದು ಒಂದೇ ದಾಖಲೆ ಮಾಡಿಲ್ಲ ಬೇರೆ ಬೇರೆ ದಾಖಲೆಯನ್ನೂ ಮಾಡಿದ್ದಾರೆ. ಫೆಬ್ರುವರಿ, ಮಾರ್ಚ್ ಎರಡು ತಿಂಗಳು ಗೃಹ ಲಕ್ಷ್ಮೀ ಹಣ ಹಾಕಿಲ್ಲ, 15 ಸೈಟ್, ವಾಚ್ ವಾಪಸ್ ಕೊಟ್ಟು ಬಿಟ್ರು, ವಾಲ್ಮೀಕಿ ನಿಗಮದಲ್ಲಿ 89 ಕೋಟಿ ಹಗರಣ ಆಗಿದೆ ಅಂತಾ ಒಪ್ಪಿಕೊಂಡರು. ವಾಪಸ್ ಕೊಡುವುದರಲ್ಲೂ ಸಿದ್ರಾಮಯ್ಯ ದಾಖಲೆ ಮಾಡಿದ್ದಾರೆ ಎಂದಿದ್ದಾರೆ.
ಕಸದ ಮೇಲೂ ಟ್ಯಾಕ್ಸ್ ಹಾಕುವ ಮೂಲಕ ದಾಖಲೆ ಮಾಡಿದ್ರು. ಜನ ಚೆನ್ನಾಗಿ ಕುಡಿಯಿರಿ ಸರ್ಕಾರಕ್ಕೆ ಆದಾಯ ಬರುತ್ತೆ ಅಂತಾ ಅಬಕಾರಿಗೆ ಟಾರ್ಗೆಟ್ ಜಾಸ್ತಿ ಮಾಡಿದ್ರು. ಕೋಗಿಲು ಬಡಾವಣೆಯಲ್ಲಿ ನಮ್ಮ ರಾಜ್ಯದವರಿಗೆ ಸೈಟ್ ಕೊಡಲಿಲ್ಲ. ಬಾಂಗ್ಲಾದೇಶದಿಂದ ಬಂದವರಿಗೆ ಸೈಟ್ ಕೊಟ್ಟರು. ಬಾಂಗ್ಲಾದೇಶದಿಂದ ಬಂದವರನ್ನ ಮತದಾರರ ಪಟ್ಟಿಯಲ್ಲೂ ಸೇರಿಸಿದ್ದಾರೆ. ವಲಸಿಗರ ಬಗ್ಗೆ ಕಾಂಗ್ರೆಸ್ ಚಕಾರ ಎತ್ತುತ್ತಿಲ್ಲ, ಹೀಗಾಗಿ ಸಿದ್ರಾಮಯ್ಯಗೆ ದಾಖಲೆಯ ವೀರ ಪ್ರಶಸ್ತಿ ಕೊಡಬೇಕು ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ : ಕೋಗಿಲು ನಿರಾಶ್ರಿತರ ಮನೆ ಹಂಚಿಕೆ ಲಿಸ್ಟ್ ಫೈನಲ್ | 26 ಜನಕ್ಕೆ ಇವತ್ತೇ ಮನೆ ಕೊಡಬಹುದು – ಸಚಿವ ಜಮೀರ್



















