ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದಂದು ವಿಶೇಷ ಉಡುಗೊರೆ ಕೊಡೋದಾಗಿ ಟಾಕ್ಸಿಕ್ ತಂಡಈಗಾಗಲೇ ಘೋಷಿಸಿತ್ತು. ಪೋಸ್ಟರ್ ರಿಲೀಸ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಹಾಗೆಯೇ ಇಂದು ಬೆಳಿಗ್ಗೆ 10 ಗಂಟೆ 25 ನಿಮಿಷಕ್ಕೆ ‘ಟಾಕ್ಸಿಕ್’ ವಿಡಿಯೋ ಗ್ಲಿಂಪ್ಸ್ ರಿಲೀಸ್ ಆಗಿದೆ. ಯಶ್ ಅವರ ಚಿತ್ರದ ಮೇಲಿರುವ ನಿರೀಕ್ಷೆ ಈಗ ದುಪ್ಪಟ್ಟು ಹೆಚ್ಚಾಗಿದ್ದು, ಯಶ್ ಫ್ಯಾನ್ಸ್ ಭರ್ಜರಿ ಸೆಲೆಬ್ರೆಷನ್ ಮಾಡುತ್ತಿದ್ದಾರೆ.
ರೆಟ್ರೋ ಕಾರಲ್ಲಿ ಸ್ಟೈಲಿಶ್ ಆಗಿ ಯಶ್ ಕ್ಲಬ್‌ಗೆ ಎಂಟ್ರಿ ಕೊಡುತ್ತಾರೆ. ಅವರು ಒಳಗೆ ಬರುತ್ತಿರುವಾಗ ಅಲ್ಲಿ ಎಲ್ಲರೂ ನಶೆಯಲ್ಲಿ ತೇಲುತ್ತಾ ಮೋಜು ಮಸ್ತಿ ಮಾಡುತ್ತಿರುತ್ತಾರೆ. ಆಗ ಯಶ್ ಅವರು ಎಣ್ಣೆ ಬಾಟಲಿ ತೆಗೆದುಕೊಂಡು ಅಲ್ಲಿದ್ದ ಮಹಿಳೆಯ ಮೇಲೆ ಸುರಿಯುತ್ತಾರೆ. ಮೇಕಿಂಗ್ ನೋಡಿದರೆ ಇದು ರೆಟ್ರೋ ಕಥೆಯ ರೀತಿ ಕಾಣುತ್ತದೆ.
ಸದ್ಯ ರಿಲೀಸ್ ಆಗಿರೋದು ಒಂದು ಗ್ಲಿಂಪ್ಸ್ ಮಾತ್ರ. ಯಶ್ ಜನ್ಮದಿನದ ಪ್ರಯುಕ್ತ ಇದನ್ನು ರಿಲೀಸ್ ಮಾಡಲಾಗಿದೆ ಅಷ್ಟೇ. ಇದು ಸಿನಿಮಾದಲ್ಲಿ ಬರುವ ಒಂದು ಕ್ಲಿಪ್ ಎನ್ನಲಾಗಿದೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಡ್ರಗ್ಸ್ ಬಗ್ಗೆ ಹೇಳಲಾಗುತ್ತಿದೆ ಎಂದು ಈ ಮೊದಲು ವರದಿ ಆಗಿದೆ.
‘ಟಾಕ್ಸಿಕ್’ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ವೆಂಕಟ್ ನಾರಾಯಣ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಬಿಗ್ ಬಜೆಟ್ನಲ್ಲಿ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಹಿಂದಿಯ ಕಿಯಾರಾ ಅಡ್ವಾಣಿ, ತಮಿಳಿನ ನಯನತಾರಾ ನಟಿಸುತ್ತಿದ್ದಾರೆ. ಈ ಸಿನಿಮಾ ವರ್ಷಾಂತ್ಯಕ್ಕೆ ರಿಲೀಸ್ ಆಗಲಿದೆ. ಇದನ್ನು, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡಲು ಆಲೋಚನೆ ನಡೆದಿದೆ. ಈ ಚಿತ್ರದಲ್ಲಿ ಹಾಲಿವುಡ್ ತಂತ್ರಜ್ಞರು ಕೂಡ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ : ಈ ಬಾರಿಯೂ ಫ್ಯಾನ್ಸ್‌ಗೆ ಯಶ್ ದರ್ಶನ ಭಾಗ್ಯವಿಲ್ಲ | ಹುಟ್ಟುಹಬ್ಬಕ್ಕೂ ಮುನ್ನ ಅಭಿಮಾನಿಗಳಿಗೆ ‘ರಾಕಿಭಾಯ್’ ಪ್ರೀತಿಯ ಸಂದೇಶ!



















