ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ ಮಗುವನ್ನು ಕೊಲೆ ಮಾಡಿ, ಬ್ಯಾಗ್ ನಲ್ಲಿಟ್ಟು ಚರಂಡಿಗೆ ಎಸೆದಿರುವ ಅಮಾನವೀಯ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ನಲ್ಲೂರಳ್ಳಿಯಲ್ಲಿ ನಡೆದಿದೆ.

ಕೊಲ್ಕತ್ತ ಮೂಲದ ಶಹಜಾನ್ ಕತೂನ್ (6) ಕೊಲೆಯಾದ ಬಾಲಕಿ. ಮಗುವಿನ ತಾಯಿ ಹಾಗು ಅಕ್ಕ ಪಕ್ಕದ ಮನೆಯವರಿಗೆ ಜಗಳ ಆಗ್ತಿತ್ತು. ಈ ಹಿನ್ನಲೆ ಆರೋಪಿ ಮಗುವಿನ ತಾಯಿಗೆ ಬುದ್ದಿ ಕಲಿಸುತ್ತೆನೆ ಎಂದು ದ್ಷೇಷದಿಂದ ಮಗುವನ್ನ ಕೊಂದಿರುವುದಾಗಿ ಆರೋಪಿಸಲಾಗಿದೆ.
ಆರೋಪಿ ಮಗುವಿನ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಬ್ಯಾಗ್ ನಲ್ಲಿ ಹಾಕಿ, ಬಳಿಕ ಬ್ಯಾಗ್‌ಅನ್ನು ಚರಂಡಿಗೆ ಎಸೆದಿದ್ದಾನೆ. ಈ ಘಟನೆ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ವೈಟ್ ಫೀಲ್ಡ್ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಕುಂದಾಪುರದಲ್ಲಿ ಬೈಕ್‌ಗೆ ಟಿಪ್ಪರ್ ಡಿಕ್ಕಿ | ಸವಾರ ಸ್ಥಳದಲ್ಲೇ ಸಾವು!



















