ಬೆಂಗಳೂರು: ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ರಾಜದೊರೈ ಹಾಗೂ ಗೌತಮ್ ಬಂಧಿತ ಆರೋಪಿಗಳು. ತಮಿಳುನಾಡು ಮೂಲದ ಗೌತಮ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಡಾಟಾ ಅನಾಲಿಸ್ಟ್ ಹಾಗೂ ಲ್ಯಾಪ್ ಟಾಪ್ ಶಾಪ್ ಇಟ್ಟಿದ್ದ ಈತ ರಾಜದೊರೈ ಎಂಬಾತನ ಮೂಲಕ ಲ್ಯಾಪ್ ಟಾಪ್ ಕಳ್ಳತನ ಮಾಡಿಸಿ ಮಾರಾಟ ಮಾಡುತ್ತಿದ್ದನ್ನು.
ರಾಜದೊರೈ ಪಿಜಿಗಳನ್ನು ಗುರುತಿಸಿ, ಬೆಳಗಿನ ಜಾವ ಪಿಜಿಗಳಿಗೆ ನುಗ್ಗಿ ಲ್ಯಾಪ್ಟಾಪ್ ಕಳ್ಳತನ ಮಾಡುತ್ತಿದ್ದನ್ನು. ಸದ್ಯ ಸಿಸಿಟಿವಿ ಆದರಿಸಿ ಆರೋಪಿ ರಾಜದೊರೈನನ್ನು ಬಂಧಿಸಲಾಗಿದ್ದು, ಆರೋಪಿ ಕೊಟ್ಟ ಮಾಹಿತಿ ಮೇರೆಗೆ ರಿಸೀವರ್ ಗೌತಮ್‌ನನ್ನು ಬಂಧಿಸಲಾಗಿದೆ. ಬಂಧಿತರಿಂದ 40 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 48 ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಬೆಂಗಳೂರು | ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿ ಕಳ್ಳತನ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ



















