ಬೆಂಗಳೂರು : ಬೆಂಗಳೂರಿನ ಹೂವಿನ ಮಾರ್ಕೆಟ್‌ನಲ್ಲಿ ಹೂವ ರಮೇಶ್ ದಾಂಧಲೆ ಹೆಚ್ಚಾಗಿರುವ ಆರೋಪ ಕೇಳಿಬಂದಿದ್ದು, ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ.
ವಿಜಯನಗರ ಅಗ್ರಹಾರ ದಾಸರಹಳ್ಳಿಯ ಹೂವಿನ ಮಾರ್ಕೆಟ್‌ನಲ್ಲಿ ಹೂವ ರಮೇಶ್ ಹವಾ ಮೇಂಟೇನ್ ಮಾಡುವ ಸಲುವಾಗಿ ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಅಲ್ಲಿದ್ದ ಬೇರೆ ಬೇರೆ ವ್ಯಾಪಾರಿಗಳ ಮೇಲೂ ಸಹ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದ್ದು, ಈತನ ಕಾಟಕ್ಕೆ ವ್ಯಾಪರಿಗಳು ಬೇಸತ್ತು ಹೋಗಿದ್ದಾರೆ.
ಈ ಹಿಂದೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಕೇಸಲ್ಲಿ ಹೂವ ರಮೇಶ್‌ನನ್ನು ಪೊಲೀಸರು ಬಂಧಿಸಿದ್ದರು. ಇದೊಂದು ವಿಚಾರವಿಟ್ಟುಕೊಂಡು ಮಾರ್ಕೆಟ್‌ನಲ್ಲಿ ಹೂವ ರಮೇಶ್ ದಾಂಧಲೆ ಮಾಡುತ್ತಿದ್ದಾನೆ ಎನ್ನಲಾಗಿದೆ.
ಸದ್ಯ ಹಲ್ಲೆಗೊಳಪಟ್ಟ ಮಹಿಳೆ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹೂವ ರಮೇಶ್ ಹಲ್ಲೆ ನಡೆಸಿದಲ್ಲದೇ ಲೈಂಗಿಕವಾಗಿಯೂ ದೌರ್ಜನ್ಯ ಮಾಡಿದ್ದಾನೆಂದು ಆರೋಪಿಸಿದ್ದಾಳೆ. ಈ ಸಂಬಂಧ ಪೊಲೀಸರು ಹೂವ ರಮೇಶ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಚಾಲಕನ ನಿರ್ಲಕ್ಷ್ಯದಿಂದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ BMTC ಎಲೆಕ್ಟ್ರಿಕ್ ಬಸ್


















