ಬೆಂಗಳೂರು : ಬೆಳ್ಳಂಬೆಳಗ್ಗೆ ಚಾಲಕನ ನಿರ್ಲಕ್ಷ್ಯಕ್ಕೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್‌ಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ವೇಗವಾಗಿ ಬಂದು ಡಿಕ್ಕಿ ಹೊಡೆದಿರುವ ಘಟನೆ ನಗರದ ಕೆಆರ್ ಸರ್ಕಲ್ಲಿನ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.

ಮೆಜೆಸ್ಟಿಕ್ ನಿಂದ ಕಾಡುಗೋಡಿಗೆ ಬಿಎಂಟಿಸಿ ಬಸ್ ತೆರಳುತ್ತಿದ್ದ ವೇಳೆ ಕೆಆರ್ ಸರ್ಕಲ್ ಬಳಿ ಅಚಾನಕ್ ಆಗಿ ಮುಖ್ಯ ರಸ್ತೆಗೆ ಬಂದಿದ ಪರಿಣಾಮ ನ್ಯಾಷನಲ್ ಟ್ರಾವೆಲ್ಸ್ ಬಸ್‌ಗೆ ಡಿಕ್ಕಿ ಹೊಡೆದಿದೆ.
ಈ ದುರಂತದಲ್ಲಿ ಬಿಎಂಟಿಸಿ ಹಾಗೂ ನ್ಯಾಷನಲ್ ಬಸ್ ವಿಂಡೋ ಗ್ಲಾಸ್ ಪುಡಿ ಪುಡಿಯಾಗಿದ್ದು, ಕೆಆರ್ ಸರ್ಕಲ್‌ನಿಂದ ನೃಪತುಂಗ ಹೋಗುವ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ.
ಇದನ್ನೂ ಓದಿ : KSRTC ಪ್ರಯಾಣಿಕರಿಗೆ ಹೊಸ ವರ್ಷದ ಗುಡ್ ನ್ಯೂಸ್ | ಟಿಕೆಟ್ ದರದಲ್ಲಿ ಭಾರೀ ರಿಯಾಯಿತಿ!


















